ಅಂಗನಾಕುಲ ಶಿರೋಮಣಿ ಶ್ರೀಮಾ |ಶೃಂಗಾರ ವನಧಿ ಗರುಡಧ್ವಜೆ ಮಂಗಳಾದೇವಿ ಹಸೆಗೇಳು ಪ
ಕ್ಷೀರಸಾಗರ ಕನ್ಯಾ ವಿಧಿ |ಮಾರಾಂತಕ ಶಕ್ರಕರಾರ್ಚಿತೆ ||ವಾರಿಜಸದನೆ ಸಿರಿದೇವಿ |ಸಿರಿದೇವಿ ತ್ರೈಲೋಕಕೆ ಜನನೀ ರಕ್ಕಸಾರಿ ಹಸೆಗೇಳು 1
ಭಾರತಿ ಪಾರ್ವತಿ ಶಾಮಲ ಮುಖ |ನೂರು ಸುರರರಸಿಯರೆಲ್ಲರು ||ಮೀರಿಧರುಷದಲಿ ಪದಪಾಡಿ | ಹಸೆಯಬರೆದಿಹರೆಲೆ ನಾರಾಯಣನ ರಾಣೀ || ಹಸೆಗೇಳು 2
ಋಷಿಗಳು ವೇದ ಪುರಾಣಗಳುಪ |ನಿಷದ್ವಾಕ್ಯಗಳಿಂದ ತುತಿಸುವರು ||ವಸುಧೆಗಾನಂದ ಪಡಿಸಲು | ಶುಭ ಕುಂದರದನೆಆಸಿತಕುಂತಲೆಯೇ ಹಸೆಗೇಳು 3
ಕಡೆಗಣ್ಣಿನ ನೋಟದಿ ಲೋಕವ |ತಡೆಯದೆ ಪುಟ್ಟಿಸಿ ಪಾಲಿಸಿ ಪುನಃ ||ಕೆಡಿಸುವೆ ಸ್ವೇಚ್ಛೆಯಲಿ ವೈದರ್ಭೆ ಸತ್ರಾಜಿತೆ ಕೃತಿ |ಯೊಡತಿ ಜಯಮಾಯಾ ಹಸೆಗೇಳು 4
ಪ್ರಾಣೇಶ ವಿಠಲನೊಳು ದ್ವೇಷಿಪ |ಹೀನರ ಸಂಹರಕೋಸುಗ ಶರ ||ಪಾಣಿಯಾಗಿಹಳೆ ಶ್ರುತಿ ವೇದ್ಯೆ | ಶ್ರುತಿವೇದ್ಯೆ ದೇವದೇವಿಕ ಅಹಿವೇಣಿ ಶುಕವಾಣಿ | ಹಸೆಗೇಳು 5
No comments:
Post a Comment