Labels

Saturday 29 February 2020

ಆತ್ಮ ಪರಮಾತ್ಮ ತತ್ವ ನೀ ತಿಳಿಯೋ aatma paramaatma tatvadarshi nee tiliyp


ಆತ್ಮ ಪರಮಾತ್ಮ ತತ್ವ ನೀ ತಿಳಿಯೋ ಪ್ರಾಣಿ
ಈ ತನುವಿನೊಳ್ ದ್ವಯ ಪಕ್ಷಿಗಳಿಪ್ಪುದು
ನೀತಿಯರಿತು ಭಜಿಸೆ ಪ್ರೀತಿಯಿಂ ಸಲಹುವ
ವಾತ ಜನಕ ನಮ್ಮ ಗೋಪಾಲಕೃಷ್ಣವಿಠಲ



ಆಟವಾಡುವ ಕೂಸು ನಾನು aatavaduva kusu naanu



ಆಟವಾಡುವ ಕೂಸು ನಾನು | ಕೃಷ್ಣ
ಕಾಟಬಡಿಸುವೆ ನಿನ್ನ ಸಾಧನವ ನೀಡೊ ಪ.
ಗುರುಗಳು ತಂದು ನಿನಗೊಪ್ಪಿಸಿದರೆಲೊ ದೇವ
ಸರಿಯ ಸಖನೆಂದು ಅನುಗಾಲವೂ
ಸಿರಿಯರಸ ಕೇಳಿನ್ನು ಹಿರಿಯನೆ ನೀನಹುದೊ
ಕಿರಿಯತನದಿಂದ ನಾ ಆಟವಾಡುವೆನೊ 1
ಹೃದಯವೆಂಬೋ ಪುಟ್ಟ ಮನೆಯ ಕಟ್ಟಿ ಅಲ್ಲಿ
ಮುದದಿಂದ ಅಷ್ಟದಳ ಪದುಮ ರಚಿಸಿ
ಒದಗಿ ಬರುತಿಹ ದುಷ್ಟ ಅರಿಗಳನೆ ನುಗ್ಗೊತ್ತಿ
ಪದುಮನಾಭನೆ ನಿನ್ನ ಜೊತೆಯವರೊಡನೆ2
ಡಿಂಬದೊಳಗಿರುತಿಹ ಅಂಬರ ಮಧ್ಯದಲಿ
ಬಿಂಬವೆನ್ನುವ ದಿವ್ಯ ಬೊಂಬೆಯನೆ ಇಟ್ಟು
ಸಂಭ್ರಮದಿ ಶೃಂಗರಿಸಿ ಹಾಡಿ ಪಾಡಿ ಕುಣಿದು
ಆಂಬ್ರಣಿನುತ ನಿನ್ನ ನೋಡಿ ದಣಿಯುವೆನೊ 3
ಪುಂಡರೀಕಾಕ್ಷ ನಿನ್ನ ಕೊಂಡಾÀಡುವೊ ಬಹಳ
ತಿಂಡಿಯನೆ ನೀಡೆನಗೆ ಅನುಗಾಲವೂ
ಭಂಡು ಮಾಡುವರೊ ಬರಿಕೈಲಿದ್ದರೆ ಸಖರು
ಕಂಡು ಕಂಡೂ ನೀನು ಸಮ್ಮನಿರಬೇಡೊ 4
ಎಷ್ಟು ಜನ ಸ್ನೇಹಿತರೊ ಈ ಮನೆಯೊಳೆಲೆ ದೇವ
ಪುಟ್ಟನಾಗಿರುವೆ ನಾನೆಲ್ಲರಿಗೆ ಇನ್ನು
ಕೊಟ್ಟರೆ ಸಲಕರಣೆ ಆಟವಾಡುವೆ ಅಳದೆ
ಶ್ರೇಷ್ಠ ಶ್ರೀ ಗೋಪಾಲಕೃಷ್ಣವಿಠ್ಠಲನೆ 5


ಅಭಯ ಪ್ರಧಾನ ಮಾಡೂ ಇಭಗಿರಿವಾಸ abhaya pradhaan maado



ಅಭಯ ಪ್ರಧಾನ ಮಾಡೂ ಇಭಗಿರಿವಾಸ ಪ.
ಮಂಗಳ ಮಹಿಮನೇ ರಂಗನಾಥನೆ ಕೃಷ್ಣಾ
ತುಂಗ ವಿಕ್ರಮ ನರಸಿಂಗ ಲಕ್ಷ್ಮೀಕಾಂತ 1
ಮೃತ್ಯು ಬೆನ್ಹತ್ತಿರೆ ಕತ್ತರಿಸುವ ಮಹ
ಶಕ್ತ ನೀನಿರುತಿರೆ ಮತ್ತಾರ ಬೇಡಲಿ 2
ನಿನ್ನ ಕಿಂಕರಳಾಗಿ ನಿನ್ನ ಸೇವೆಯ ಮಾಳ್ಪ
ಉನ್ನಂತ ಅಭಿಲಾಷೆಯನ್ನು ಸಲ್ಲಿಸು ದೇವ 3
ಹಿಂದಿನ ಎಡರುಗಳೊಂದೊಂದರಲಿ ಕಾಯ್ದೆ
ಇಂದು ಮುಂದೂ ಕಾಯೋ ಮಂದಹಾಸನೆ ಸ್ವಾಮಿ 4
ಹರಿಗುರು ಕಾರ್ಯಕಲ್ಲವೆ ಎನ್ನ ಈ ದೇಹಾ
ಸಿರಿವರ ಗೋಪಾಲಕೃಷ್ಣವಿಠ್ಠಲ ಸ್ವಾಮಿ 5


ಅಡಗಿದೇತಕೊ ರಜತ ಕವಚದೊಳಗೆ


ಅಡಗಿದೇತಕೊ ರಜತ ಕವಚದೊಳಗೆ
ಅಡಿ ಭಕ್ತರಾಡುವೋ ಬಿಡಿ ನುಡಿಗೆ ಪ.
ಗೇಣು ಪ್ರಮಾಣದಾ ಪ್ರಾಣರಾಯನೆ ಛಿದ್ರ
ಕಾಣುತಿರೆ ಶಿಲೆರೂಪದಲ್ಲಿ ನಲಿದು
ಆನಂದದಿಂ ನುಡಿದ ಆನತರ ವಚನಕ್ಕೆ
ನೀ ನಾಚಿ ಜಗಕಿನ್ನು ಕಾಣಬಾರದು ಎಂದು 1
ದುರುಳ ಸೀತೆಯ ಕದ್ದು ತೆರಳುತಿರೆ ನಿಮ್ಮ ಕಂ
ಡರವಿಂದನಯನೆ ಆಭರಣ ಕಟ್ಟೊಗೆಯೇ
ಸಿರಿಚರಣ ಸ್ಪರ್ಶವೆನಗಿರಲೆಂದು ಪೈಜಣವ
ಮುರಿಸಿ ಕವಚವ ಮಾಡಿ ಮೆರೆವ ವೈಖರಿಯೇ 2
ರಜತಗಿರಿ ವಾಸ ರಣದಲ್ಲಿ ಬ್ರಹ್ಮಾಸ್ತ್ರವನು
ಭುಜಬಲದಿ ಬಿಡಲು ಲೆಕ್ಕಿಸದೆ ಮೂದಲಿಸೀ
ನಿಜವಾಸ ಸ್ಥಳವಿಲ್ಲದಲೆಯಲೆಂದೆನ್ನುತಲಿ
ರಜತಗಿರಿ ಕವಚ ಮಾಡಿರುವ ವೈಭವವೋ 3
ಕುನ್ನಿ ಮತಗಳ ಮುರಿದು ಘನ್ನ ಶಾಸ್ತ್ರವನೊರೆದು
ಚನ್ನಕೃಷ್ಣನ ರಜತ ಪೀಠದಲಿ ನಿಲಿಸೀ
ಎನ್ನೊಡೆಯನಾಸನವು ಎನಗೆ ಭೂಷಣವೆಂದು
ಚನ್ನಾಗಿ ಮೈಗೆ ಸುತ್ತಿರುವ ವಿಸ್ಮøತಿಯೋ 4
ನಿನ್ನಲ್ಲಿ ವಡಕಿರಲು ಪೂಜಿಸುವ e್ಞÁನಿಗಳಿ
ಗಿನ್ನೊಂದು ನುಡಿ ಅಜ್ಞರಿಂ ಬೇಡವೆಂದೂ
ಚನ್ನಾಗಿ ಹಿಂದೆ ಮುಂದೆಡಬಲದಿ ಮೇಲ್ ಕೆಳಗೆ
ಇನ್ನು ತೋರದ ತೆರದಿ ಮರೆಮಾಡಿಕೊಂಡೂ5
ವಡೆಯ ಈರೇಳು ಲೋಕದಿ ವ್ಯಾಪ್ತನಾಗಿ ನೀ
ನುಡಿದು ಶ್ರೀಮಂತ್ರ ಜೀವರ ಕಾಯೊ ಎನಲೂ
ವಡೆಯಗುತ್ತರ ಪೇಳಲಾರದಲೆ ಬ್ಯಾಸತ್ತು
ಅಡಿಗಿಲ್ಲಿ ಮೈದೋರದಿರುವ ಪರಿ ಏನೋ 6
ಕಂಡವರು ಬಿಡುವರೇ ಆಡದಲೆ ನಿನ ಚರಿತೆ
ಚಂಡ ವಿಕ್ರಮನಹುದೊ ಮುನಿಯದಲೆ ಸಲಹೋ
ಪಾಂಡವರ ಪಾಲ ಗೋಪಾಲಕೃಷ್ಣವಿಠ್ಠಲನತೊಂಡ ಶ್ರೀ ಪ್ರದ್ಯುಮ್ನತೀರ್ಥ ಕರ ಪೂಜ್ಯ 7


ಅಕ್ಕೋರಂಗ ನೋಡೆ ಇಕ್ಕೋ akko ranga node


ಅಕ್ಕೋರಂಗ ನೋಡೆ ಇಕ್ಕೋ ಕೃಷ್ಣನೋಡೆ
ತಕ್ಕಥೈ ಎಂದೀಗೆ ಸಿಕ್ಕಿದ ನಮ್ಮ ಕೈಗೆ ಪ.
ಕುರುಳು ಕುಂತಳದಿಂದ ಕಸ್ತುರಿ ತಿಲುಕ ಚಂದ
ಪರಮ ಪುರುಷ ಬಂದ ನೀಲ ವರ್ಣ ನಂದ 1
ಮುಗುಳು ನಗೆಯ ಕಾಂತಿ ಚಂದ್ರನುದಯ ಭ್ರಾಂತಿ
ಸೊಗಸು ನೋಡಲೆ ಕಾಂತೆ ಸೆಳೆವ ಮನವ ಶಾಂತೆ 2
ಬಾರೋ ಬಾ ಗೋಪಾಲಕೃಷ್ಣವಿಠ್ಠಲ ಜಾಲ
ತೋರುವ ನೋಡೆ ಬಾಲೆ ಸೇರೋಣ ಬಾ ಸುಶೀಲೆ 3


Saturday 15 February 2020

ಗೋಪಾಲದಾಸರಾಯ ಮಾಂಪಾಲಯ gopaladasaraya maampalaya


ಗೋಪಾಲದಾಸರಾಯ ಮಾಂಪಾಲಯ ಪ
ಗೋಪಾಲದಾಸರಾಯಾ ಅಪಾರ ಮಹಿಮ ಮ-
ತ್ಪಾಪಗಳೋಡಿಸಿ ಕಾಪಾಡೊ ಗುರುರಾಯ ಅ.ಪ
ಗಜಮುಖ ನಮಿಸುವೆ ಸುಜನ ಪಾಲಕ ಶ್ರೀಮದ್
ವಿಜಯದಾಸರಿಗೆ ನಿಜ ಶಿಷ್ಯರೆನಿಸಿದ 1
ಧನ್ವಂತ್ರಿ ಜಪದಿ ಜಗನ್ನಾಥದಾಸರ
ಬನ್ನವ ಬಿಡಿಸಿದ ಘನ್ನ ಮಹಿಮಗುರು 2
ಏನು ಕರುಣವೋ ಶ್ರೀ ಮಾನವಿ ದಾಸರಿಗೆ
ಸಾನುರಾಗದಿ ಆಯುರ್ದಾನವ ಮಾಡಿದ 3
ಪದುಮನಾಭನ ಪದಪದುಮ ಮಹಿಮೆಗಳ
ವಿಧ ವಿಧ ಪದಸುಳಾದಿಗಳಿಂದ ತುತಿಸಿದ 4
ಶರಣು ಜನಕೆ ಸುರತರುವೆನಿಸಿ ಧರೆಯೊಳು
ಮೆರೆವ ' ಕಾರ್ಪರ ನರಹರಿ’ ಯ ನೊಲಿಸಿದಂಥ5


ಕರುಣಿಸು ನರಹರಿಯೇ ಸ್ಮರಣಿಯ karunisu narahariya


ಕರುಣಿಸು ನರಹರಿಯೇ ಸ್ಮರಣಿಯ
ಕರುಣಿಸು ನರಹರಿಯೇ ಪ
ಕರುಣಿಸುವದು ತವಸ್ಮರಣೆ ನಿರಂತರ
ಧರಣಿ ಸುರಪ್ರಿಯ ಚರಣಕೆರಗುವೆನು ಅ.ಪ
ಶರಣರ ಸುರತರುವೇ ಕರುಣಾ
ಶರಧಿ ಶಿರಿಯಧೊರೆಯೆ
ಸರಸಿಜ ಭವಮುಖರರಸನೆ ತವಪದ
ಸರಸಿಜದಲಿ ಮನವಿರಿಸುವಂತೆ ಜವ 1
ಕಂದನನುಡಿಕೇಳಿ ಸ್ತಂಭದಿ
ಬಂದಿಯೊ ವೇಗದಲಿ
ವಂದಿಸುವೆನು ಭವಬಂಧ ಬಿಡಿಸಿ ಮನ
ಮಂದಿರದಲಿ ತವ ಸಂದರುಶನವನು 2
ಚಾರು ಕೃಷ್ಣ ತೀರಾಕಾರ್ಪರಾ
ಗಾರನೆ ಸ್ಮರಿಸುವರ
ಘೋರದುರಿತ ಹರನಾರಸಿಂಹ ನಿ
ನ್ನಾರಧಕರೊಳು ಸೇರಿ ಸುಖಿಸುವಂತೆ 3


ಕರುಣಾದಿ ಪೊರೆಯನ್ನ ಪಾರ್ವತೀರಮಣ karunadi poreyanna

ಕರುಣಾದಿ ಪೊರೆಯನ್ನ ಪಾರ್ವತೀರಮಣ ಪುರಹರನೆ ಕರುಣಿಪುದೆಮಗೆ ಸುಜ್ಞಾನ \\ ಪ\\
ಧರಣಿಯೊಳು ಗೂಗಲ್ಲು ಕ್ಷೇತ್ರ ಸುಮಂದಿರನೆ ನಿನ್ನ ಸ್ಮರಿಸುವೆನು ಅನುದಿನ \\ಅ.ಪ\\
ನಿರುತ ಸ್ಮರಿಪರ ದುರಿತ ಗಜ ಪಂಚಾಸ್ಯ ಕರಮುಗಿವೆ ನೆರೆನಂಬಿನಿನ್ನನು ಶೇವಿಸುವ ಶರಣರಿಗೆ ಸುರತರುವೆ
ಜನಿಸಿರುವರೊಳು ಸರ್ವರಿಗೆ ಮನದಲಿ ಪ್ರೇರಿಸುವ ಗುರುವೆ ಗೂಗಲ್ಲಪ್ರಭುವೆ \\1\\
ಕ್ಷಿತಿಪವರ ಪರಿಕ್ಷಿತಗೆ ಶೃತಿ ಸಮ್ಮತವೆನಿಸಿದಂಥ ಭಾಗವತಸು ಕಥಾ ಮೃತವನುಣಿಸಿದ ಪರಮ ಪ್ರಖ್ಯಾತ
ತಿಳಿಸೆನ್ನ ಮನಕೆ ತದರ್ಥಗಳ ಪೊಳೆವಂತೆ ಶುಭಚರಿತ ಜಿತ ಮನೋಜಾತ \\2\\
ಅನುಗಾಲ ಭಕುತರ ಮ್ಯಾಳವನು ಪರಿಪಾಲಿಸಲು ಶಿವನೆ ರಾಜಿಸುವ
ಕೃಷ್ಣಾಕೂಲದಲಿ ನಿಂದಿರುವಿ ಶಂಕರನೇ ಜನಮೇಜಯಾಖ್ಯ ನೃಪಾಲಪೂಜಿತ ಪಾದ ಪಲ್ಲವನೇ ಸುವಿಶಾಲ ಮಹಿಮನೇ \\3\\
ನಂದೀಶ ಗಮನನೆ ವಂದಿಸುವೆ ಇಂದ್ರಾದಿಸುರರೊಡೆಯ ನೀಡಿದೆಯೊ ಗೌತುಮ
ರಂದ ಮಾಡಿದ ತಪಕೆ ಒಲಿದಭಯ ಮನಮಂದಿರದಿ ಗೋವಿಂದನಂಘ್ರಿಯ ಕಾಂಬುವೊ ಬಗೆಯ ತೋರೆನಗೆ ಜೀಯ\\4\\
ಶ್ರೀಶ್ವೇತಗಿರಿ ಸುಕ್ಷೇತ್ರ ಪಂಚ ಕ್ರೋಶಗನು ನೀನೆ ಸರ್ವೇಶ ಕಾರ್ಪರ ವಾಸಸಿರಿ ನರಕೇಸರಿಗೆ ಪ್ರಿಯನೇ
ದುರ್ವಿಷಯದಲಿ ಅಭಿಲಾಷೆ ಪುಟ್ಟಿಸದಂತೆ ಶಶಿಧರನೆ ಸಿರಿವ್ಯಾಸಕುವರನೇ\\5\\


ಏನು ಸಾಧನ ಮಾಡಿ ಕೃಷ್ಣನ ಕರವ ಸೇರಿತೋ enu saadhana maadi


ಏನು ಸಾಧನ ಮಾಡಿ ಕೃಷ್ಣನ ಕರವ ಸೇರಿತೋ
ಸುಖಪೊಂದಲು ಪ
ಸಾನು ರಾಗದಿ ಶ್ರವಣ, ಮನನÀ ಧ್ಯಾನಗೈದಿತೋ
ಬಹು ಜನ್ಮದಿ ಅ.ಪ
ದೇವದಾರು, ಅಗರು, ಚಂದನ, ಮಾವು, ಚಂಪಕ,
ಹರಿ ತೋಷಕ
ಸಾವಿರಾರು ತರುಲತೆಗಳೀ ವಸುಧಿಯೊಳಿರಲೂ
ಬಿದಿರಿನಕೊಳಲು 1
ಮುರಮಡÀನನ ಅಭಯ ಕರದವರ
ಪ್ರಸಾದವ ಕಮಲೋಧ್ಬವ
ಸ್ಮರರಿಪು ಮುಖಸುರರು ಬೇಡಲು ದೊರೆಯದೀ
ವಿಭವ ವಂಶೋದ್ಬವ 2
ತ್ರಾಣವೇನು ಮುರಲಿಗೆ ಶ್ರೀ ಹರಿಯ ವದನದೊಳು
ಸುಧೆ ಸವಿಯಲು
ಶ್ರೀನರಸಿಂಹನರಾಣಿ ತಾನೆ ವೇಣುರಂಧ್ರದೊಳು
ನಿಂದಿರುವಳು 3


ಎಂತು ನಾತುತಿಸಲಿ ಯತಿವರ entu natutisalu


ಎಂತು ನಾತುತಿಸಲಿ ಯತಿವರ
ಚರ್ಯನಾಮುಗಿವೆನು ಕೈಯ್ಯಾ ಪ
ಮಂತ್ರಸದನ ಪದ ಚಿಂತಕ ಶ್ರೀ ರಘು ಕಾಂತಕರಜ ರಘು
ದಾಂತ ಯತೀಂದ್ರರ ಅ.ಪ
ಅಂತರಂಗದಿ ಸಂತತ ಶ್ರೀಹರಿಯ ಚಿಂತಿಸುತಲಿ ಭೂಮಿಯ
ಕಾಂತ ದಂಷ್ಟ್ರದಿ ಸಂಜನಿಸಿದ ನದಿಯ ಸಂಗಮ ಶುಭನಿಲಯ
ಶಾಂತದಾಂತ ಧೀಮಂತರೆನಿಸುತ ದಿಗಂತರದಲಿ
ವಿಶ್ರಾಂತ ಸುಮಹಿಮರ 1
ಮೇದಿನಿ ಜಾತ ಪತಿ ಲಕ್ಷ್ಮಣರ ಪಾದಾಂಬುಜ ಮಧುಪರ
ಮೋದಾಶ್ರು ಸುರಿಸುತ ಪೂಜಿಸಿದವರ ಪುಲಕೀತ ವಿಗ್ರಹರ
ವಾದಿವಾರಣ ಮೃಗಾಧಿಪರೆನಿಸುತ ಮೋದತೀರ್ಥ ಸುಮ
ತೋದಧಿ ಚಂದಿರ 2
ಇಳಿಯೊಳು ಚರಿಸುತ ಬುಧ ಜನರನ್ನು ಚಲಿಸುತ ಛಾತ್ರರನು
ತಿಳಿಸೀ ಸಚ್ಛಾಸ್ತ್ರವ ಮರ್ಮಗಳನ್ನು ಉದ್ಧರಿಸ್ಯವರನ್ನು
ಯಳಮೇಲಾರ್ಯರ ಒಲುಮೆ ಪಡೆದು ಭವ
ಜಲಧಿಯ ದಾಟಿದ ಕಲುಷ ವಿದೂರರ 3

ಪ್ರಥಮಾಶಿಲೆ ಕ್ಷೇತ್ರದೊಳಿಹ ಗುರುವಿಜಯ
ದಾಸರ ಶುಭಚರಿಯ
ಸ್ತುತಿಸಿ ಶೇವಿಸಿ ಪಡೆದರು ಗುರುಕೃಪೆಯ ನೋಳ್ಪರಿಗಾಶ್ಚರ್ಯ
ನತ ಜನರಘ ಪರ್ವತ ಪವಿ ಸನ್ನಿಭ
ಕ್ಷಿತಿ ಸುರತತಿ ಸೇವಿತ ಪದ ಪದ್ಮರ 4

ಕ್ಷೋಣಿಯೊಳು ಕಾಣೆ ನಿವರಿಗೆ ಸಮಾನ
ಜಾಣ ಮಾನವರನ
ಸಾನುರಾಗದಿ ಧ್ಯಾನಿಸಲಿವರನ್ನ ಕಾಮಿತ ಗರಿವರನ
ಶ್ರೀನಿಧಿ ಕಾರ್ಪರ ಸ್ಥಾನಗ ನರಪಂಚನನನೊಲಿಸಿದ
ಮೌನಿವರೇಣ್ಯರ 5


ಇಂದು ಆರುತಿ ತಂದು ಬೆಳಗಿರೆ ಸಿಂಧುರಾಜನ ಕುವರಿಗೆ indu aaruti tandu belagire


ಇಂದು ಆರುತಿ ತಂದು ಬೆಳಗಿರೆ ಸಿಂಧುರಾಜನ ಕುವರಿಗೆ
ಸಿಂಧು ರಾಜನ ಕುವರಿಗೆ ಅರವಿಂದ
ನಾಭನ ಮಡದಿಗೆ ಪ
ಅಂದು ಸುರಕೃತ ಸಿಂಧು ಮಥÀನದಿ ಬಂದು
ನೋಡುತ ಕೃಷ್ಣಗೆ
ವಂದಿಸುತ ಪೂಮಾಲೆ ಹಾಕಿದ
ನಂದಗೋಪಕುಮಾರಗೆ 1
ಎಲ್ಲದೇಶ ದೊಳೆಲ್ಲ ಕಾಲದೊಳೆಲ್ಲ ಸುರರೊಳು ಕೃಷ್ಣಗೆ
ಇಲ್ಲ ಸಮರೆಂತೆಂಬುದನು ಜಗಕೆಲ್ಲ ತೋರಿದ ದೇವಿಗೆ 2
ವಾರವಾರದಿ ಚಾರುಪದಯುಗ ಸಾರಿಭಜಿಸುವ ಜನರಿಗೆ ಆ-
ಪಾರ ಸೌಖ್ಯಗಳೀವ ಕಾರ್ಪರ ನಾರಸಿಂಹನ ರಾಣಿಗೆ3


ಇಂದು ಆರತಿ ತಂದು ಬೆಳಗಿರೆ indu aarati tandu belagire


ಇಂದು ಆರತಿ ತಂದು ಬೆಳಗಿರೆ ಇಂದಿರಾವರಗೆ
ಮಂದರಧರಗಿಂದು ಪ
ನಂದಸುತನಿಗೊಂದಿಸುತಲಿ ಸಿಂಧು ಶಯನಗೆ
ಕುಂದರದನೆ ಅ.ಪ
ನಂದಿ ವಾಹನ ವಂದಿತ ದಶ
ಕಂಧರಾಂತಗೆ ಕುಂದರದನೆ
ವಂದಿಸುವರ ಬಂಧ ಬಿಡಿಶ್ಯಾ
ನಂದಗರಿವಗೆ ಮಂದಗಮನೆ 1
ಅಂಗನೆಯರು ಶೃಂಗಾರದಲಿ
ಸಂಗೀತ ಪ್ರಿಯಗೆ ಭೃಂಗಾಲಕಿ
ಗಂಗಾಪಿತ ಮಂಗಳಾಂಗ ವಿ-
ಹರಿಗ ವಾಹನಗೇ ತಿಂಗಳಮುಖಿ 2
ನಾರಿಯಳ ನುದ್ಧಾರ ಮಾಡಿದ
ಚಾರು ಚರಣಗೆ ನಾರಿ ಮಣಿಯೆ
ಸೇರಿದವರ ಪೊರೆವ ಕಾರ್ಪರ
ನಾರಶಿಂಹಗೆ ಭೂರಿಮಹಿಮಗಿಂದು 3


ಆರುತೀಯ ತಾರೆ ಶ್ರೀಹರಿಗೆ aarutiya taare shri harige

ಆರುತೀಯ ತಾರೆ ಶ್ರೀಹರಿಗೆ ಸುರಸಾರ್ವಭೌಮಗೆ ಪ
ವಾರಿಜನಾಭಗೆ ನೀರದಾಭಗೆ ಬಾರೆ
ಬೇಗನೆ ಸಾರಸಾಂಬಕಿಅ.ಪ
ಮಾರಜನಕಗೆ ವಾರಿಜಭವ ಕು-
ಮಾರ ಜನಕ ಮುಖಾಮರೇಡ್ಯಗೆ
ಮಾರವೈರಿ ಚಾಪ ಮುರಿದ ಸುಕು-
ಮಾರ ಶರೀರ ಸೀತಾರಾಮ ಚಂದ್ರಗೆ 1
ಇಂದಿರವರಗೆ ಮಂದರಧರ ಪು-
ರಂದರಾನುಜ ಸಿಂಧುಶಯನಗೆ
ಮಂದಯಾನೆ ಛಂದದಿಂದ ಬಂದೀಗ
ವಂದೀಶ್ಯಾನಂದಾದಿ ಬೆಳಗಲು 2
ವಾರಣಭಯ ನಿವಾರಣ ಜಗ-
ತ್ಕಾರಣಗೆ ಸುಖಪೂರ್ಣದೇಹಗೆ
ಸೇರಿ ತನ್ನ ಸೇವಿಪರಘ ದೂರ
ಕೊಪ್ಪರ ಶ್ರೀ ನಾರಸಿಂಹನಿಗೆ 3


Sunday 9 February 2020

ಕಂಡೆನಾ ಕನಸಿನಲಿ ಗೋವಿಂದನಪ kandena kanasali govindana


ಕಂಡೆನಾ ಕನಸಿನಲಿ ಗೋವಿಂದನಪ
ಕಂಡೆನಾ ಕನಸಿನಲಿ ಕನಕರತ್ನದ ಮಣಿಯ |
ನಂದನ ಕಂದ ಮುಕುಂದನ ಚರಣವ ಅ.ಪ
ಅಂದುಗೆ ಕಿರುಗೆಜ್ಜೆ ಘಲಿರೆಂಬ ನಾದದಿ
ಬಂದು ಕಾಳಿಂಗನ ಹೆಡೆಯನೇರಿ ||
ಧಿಂಧಿಮಿ ಧಿಮಿಕೆಂದು ತಾಳಗಳಿಂದಾ
ನಂದದಿ ಕುಣಿವ ಮುಕುಂದನ ಚರಣವ 1
ಉಟ್ಟ ಪೀತಾಂಬರ ಉಡಿಯ ಕಾಂಚಿಯ ದಾಮ
ತೊಟ್ಟ ಮುತ್ತಿನ ಹಾರ ಕೌಸ್ತುಭವು ||
ಕಟ್ಟಿದ ವೈಜಯಂತಿ ತುಲಸಿಯ ವನಮಾಲೆ
ಇಟ್ಟ ದ್ವಾದಶನಾಮ ನಿಗಮಗೋಚರನ 2
ಕಿರುಬೆರಳಿನ ಮುದ್ರೆಯುಂಗುರ ಮುಂಗಡೆ
ಕರದಲಿ ಕಂಕಣ ನಳಿತೋಳುಗಳ ||
ವರಚತುರ್ಭುಜ ಶಂಖಚಕ್ರದಿ ಮೆರೆವನ
ನಿರುತದಿ ಒಪ್ಪುವ ಕರುಣಾ ಮೂರುತಿಯ3
ಬಣ್ಣದ ತುಟಿ ಭಾವರಚನೆಯ ಸುಲಿಪಲ್ಲ
ಸಣ್ಣ ನಗೆಯ ನುಡಿ ಸವಿಮಾತಿನ ||
ಪುಣ್ಯ ಚರಿತ್ರನ ಪೊಳೆವ ಕಿರೀಟನ
ಕಣ್ಣು ಮನ ತಣಿಯದ ಕಂಸಾರಿ ಕೃಷ್ಣನ 4
ಮಂಗಳ ವರತುಂಗಭದ್ರದಿ ಮೆರೆವನ
ಅಂಗಜಪಿತ ಶ್ರೀ ಲಕ್ಷ್ಮೀಪತಿಯ ||
ಶೃಂಗಾರ ಮೂರುತಿ ಪುರಂದರ ವಿಠಲನ
ಕಂಗಳಿಂದಲಿ ಕಂಡೆ ಹಿಂಗಿತು ಭವಭಯ 5


ಕಂಡೆ ನಾ ಗೋವಿಂದನ kande naa govindana


ಕಂಡೆ ನಾ ಗೋವಿಂದನ
ಪುಂಡರೀಕಾಕ್ಷ ಪಾಂಡವ ಪಕ್ಷನ ಪ
ಕೇಶವ ನಾರಾಯಣ ಶ್ರೀ ಕೃಷ್ಣನ
ವಾಸುದೇವ ಅಚ್ಯುತಾನಂತನ ||
ಸಾಸಿರ ನಾಮದ ಶ್ರೀ ಹೃಷಿಕೇಶನ
ಶೇಷಶಯನ ನಮ್ಮ ವಸುದೇವ ಸುತನ 1
ಮಾಧವ ಮಧುಸೂದನ ತ್ರೀವಿಕ್ರಮನ
ಯಾದವ ಕುಲಜನ ಮುನಿವಂದ್ಯನ ||
ವೇದಾಂತ ವೇದ್ಯನ ಶ್ರೀ ಇಂದಿರೆ ರಮಣನ
-ನಾದಿ ಮೂರುತಿ ಪ್ರಹ್ಲಾದವರದನ 2
ಪುರುಷೋತ್ತಮ ನರಹರಿ ಶ್ರೀಕೃಷ್ಣನ
ಶರಣಾಗತ ವಜ್ರಪಂಜರನ ||
ಕರುಣಾಕರ ನಮ್ಮ ಪುರಂದರ ವಿಠಲನ
ನೆರೆ ನಂಬಿದೆನು ಬೇಲೂರ ಚೆನ್ನಿಗನ 3


ಕಂಡೆ ಕಂಡೆ ಕಂಡೆನಯ್ಯಾ ಕಂಗಳ kande kande kandenayya


ಕಂಡೆ ಕಂಡೆ ಕಂಡೆನಯ್ಯಾ ಕಂಗಳ ದಣಿಯುವ ತನಕ
ಮಂಗಳ ಮೂರುತಿ ಮನ್ನಾರು ಕೃಷ್ಣನ ಪ
ಉಟ್ಟ ಪೀತಾಂಬರ ಕಂಡೆ ತೊಟ್ಟ ವಜ್ರದಂಗಿ ಕಂಡೆ
ದಕ್ಷಿಣದ ದ್ವಾರಕಿ ಮನ್ನಾರು ಕೃಷ್ಣನ 1
ಕಡೆವ ಕಡೆಗೋಲ ಕಂಡೆ ನಡುವಿನೊಡ್ಯಾಣ ಕಂಡೆ
ಕಡು ಮುದ್ದು ಮನ್ನಾರು ಕೃಷ್ಣನ ಕಂಡೆ 2
ದೇವಕಿ ದೇವಿಯರ ಕಂಡೆ ಗೋಪಿಯರ ಮುದ್ದಾಟ ಕಂಡೆ
ಮಾವ ಕಂಸನ ಮರ್ದನ ಶ್ರೀ ಕೃಷ್ಣನ 3
ಆಕಳ ಕಾವುದ ಕಂಡೆ ಗೋಪಾಲಕೃಷ್ಣನ ಕಂಡೆ
ವೈಕುಂಠವಾಸನ ಮನ್ನಾರು ಕೃಷ್ಣನ 4
ಶೇಷನ ಹಾಸಿಕೆಯ ಕಂಡೆ ಸಾಸಿರ ನಾಮನ ಕಂಡೆಶ್ರೀಶ ಪುರಂದರ ವಿಠಲ ಕೃಷ್ಣರಾಯನ 5


ಕಂಡು ಕಂಡೆಂತು ಕೈ ಬಿಡುವೆ ಹರಿಯೆ kandu kandentu kai biduve


ಕಂಡು ಕಂಡೆಂತು ಕೈ ಬಿಡುವೆ ಹರಿಯೆ |
ಪುಂಡರೀಕಾಕ್ಷ ನಿನ್ನ ನಂಬಿದ ಮೇಲೆ ಪ
ಕ್ಷಣವೊಂದು ಯುಗವಾಗಿ ತೃಣಕಿಂತ ಕಡೆಯಾಗಿ |
ಬಣಗುದಾರಿದ್ರ್ಯದಲಿ ಬಲು ನೊಂದೆನಯ್ಯ ||
ಫಣಿಶಾಯಿ ಪ್ರಹ್ಲಾದವರದನೇ ನೀನೆನಗೆ |
ಹೊಣೆಯಾದ ಮೇಲಿನ್ನು ಮರುಳು ಗೊಳಿಸುವರೆ? 1
ಒಂದು ದಿನ ಅತಿಥಿಗಳನುಪಚರಿಸಿದವನಲ್ಲ |
ಬೆಂದೊಡಲ ಹೊರೆದು ಬೇಸತ್ತೆನಯ್ಯ ||
ಕುಂದು-ಕೊರತೆಯು ಏಕೆ ? ನಿನ್ನ ನಂಬಿದೆ ದಯಾ-|
ಸಿಂಧು ಗೋವಿಂದನೇ ತಂದೆಯಾದ ಮೇಲೆ 2
ಬಂಧು ಬಳಗ ಮುನ್ನಿಲ್ಲ ಬದುಕಿನಲ್ಲಿ ಸಖವಿಲ್ಲ |
ನಿಂದ ನೆಲ ಮುನಿಯುತಿದೆ ನೀರಜಾಕ್ಷ ||
ತಂದೆ-ತಾಯಿಯು ನೀನೆ ಬಂಧು ಬಳಗವು ನೀನೆ |
ಕುಂದದೇ ರಕ್ಷಿಸೈ ನಂದನಂದನನೆ 3
ಆಶೆಯನು ಬಿಡಲಿಲ್ಲ ಅತಿ ಹರುಷವೆನಗಿಲ್ಲ |
ದೇಶದೇಶವ ತಿರುಗಿ ದೆಸೆಗೆಟ್ಟೆನಯ್ಯ ||
ವಾಸವಾರ್ಚಿತನಾದ ವೈಕುಂಠನಿಲಯ ಲ-|
ಕ್ಷ್ಮೀಶ ನೀಯೆನ್ನ ಕಣ್ಣಾರೆ ಕಂಡ ಮೇಲೆ 4
ಭಕುತವತ್ಸಲನೆಂಬ ಬಿರುದು ಹೊತ್ತಿದ ಮೇಲೆ |
ಭಕುತರಾಧೀನನಾಗಿರ ಬೇಡವೆ ||
ಮುಕುತಿದಾಯಕನೆ ಬೇಲೂರು ಪುರಾಧೀಶ್ವರ |
ಸಕಲ ದೇವರದೇವ ಪುರಂದರ ವಿಠಲ5


ಆರತಿಯನು ನಾನು ಬೆಳಗುವೆ


ಆರತಿಯನು ನಾನು ಬೆಳಗುವೆ ನಮ್ಮಪ್ರೇರಿಪ ಪ್ರಭುವ ಪಡೆವೆನೆಂಬ ಪವಿಷಯಂಗಳಾರತಿ ವಿಸ್ತರಿಸಲು ಬಹುವಿಷಮಮಾರ್ಗವ ಕಾಬ ವೊಡಲಿತ್ತವುವಿಷವಾುತಾ ಸುಖ ವಿವಿಧ ಭೋಗಂಗಳುಮೃಷೆಯೆಂದು ಹರಿಯನ್ನೆ ಮಚ್ಚಿಕೊಂಬ 1ಲೋಕಂಗಳೈದಲು ಲೋಪವಾದವುಯೆಲ್ಲಸಾಕಾುತವರಲ್ಲಿ ಸಂಚರಿಸಿಈ ಕುಹಕವ ನಂಬಲೆಲ್ಲವು ಬಹು ದುಃಖಶ್ರೀಕಾಂತನ ಕೂಡಿ ಸುಖವಿರುವ 2ಹದಿನಾಲ್ಕು ಕರಣದ ಹವಣಿನಾರತಿಯಲ್ಲಿಹುದುಗಿಸಿ e್ಞÁನದ ಹೊಸ ದೀಪವಹೃದಯಕಮಲದಲ್ಲಿ ಹೊಂದಿಹ ತಿರುಪತಿಸದನ ವೆಂಕಟಗೆತ್ತಿ ಸುಖಿಯಾಗುವ 3ಓಂ ಶಿಶುಪಾಲ ಶಿರಶ್ಛೇತ್ರೇ ನಮಃ


ಆದಿಯಲಿ ಕೌರವರ


ಆದಿಯಲಿ ಕೌರವರ ಪಾಂಡವಮೇದಿನೀಶರ ಜನನ, ವಿದ್ಯವನೋದಿದುದು ಲಾಕ್ಷಾನಿವಾಸದಲಗ್ನಿ ಸಂಬಂಧವೇದವಿದರೂಪದಲ್ಲಿ ಧರ್ಮಸುತಾದಿಗಳು ತಾÀವಿದ್ದು ದ್ರೌಪದಿಗಾದರೈವರು ಪತಿಗಳೆಂಬುದು ಭಾರತಾಖ್ಯಾನ 1ದ್ಯೂತದಲಿ ರಾಜ್ಯವನು ಸ್ತ್ರೀಯನುಸೋತು ವನದಲಿ ನಿಂದು ಗುಪ್ತದಿದೂತರಾದರು ಮತ್ಸ್ಯನೃಪತಿಯ ಮೆರೆವ ನಿಳಯದಲಿಮಾತ ಸಲಿಸೆ ಮಹಾತ್ಮ ಕೃಷ್ಣಪ್ರೀತಿಯಲಿ ಪಾಂಡವರ ಕಾರ್ಯಕ್ಕೀತ ಸಂಧಿಗೆ ನಡೆದನೆಂಬುದು ಭಾರತಾಖ್ಯಾನ 2ಮುರಿದು ಸಂಧಿಯನುಭಯರಾಯರನೆರಹಿ ಪಾರ್ಥಾಸ್ತ್ರದಲಿ ಸರ್ವರತರಿದು ಯಮಸುತನಿರಿಸಿ ರಾಜ್ಯದ ಪರಮ ಪೀಠದಲಿಎರೆದನಭಿಷೇಕವನು ಭಕ್ತರಹೊರೆದ ತಿರುಪತಿ ವೆಂಕಟೇಶನುಮೆರೆದ ಮಹಿಮೆಯನೆಂಬುದಿದು ತಾ ಭಾರತಾಖ್ಯಾನ 3ಓಂ ಅನಂತಾಯ ನಮಃ


ಅಯ್ಯಯ್ಯೊ ಮೊರೆುಡಲೇಕೆ


ಅಯ್ಯಯ್ಯೊ ಮೊರೆುಡಲೇಕೆ ಕೇಳಿಸದೆನ್ನಹುಯ್ಯಲು ವೆಂಕಟರಮಣನೆಕಯ್ಯಾರೆ ಋಣಪಿಶಾಚಕೊಪ್ಪಿಸಿದೆಯಾಕೊಯ್ಯಬಾರದೆ ಕೊರಳನು ಕೋಪ ಬಂದರೆ ಪದೇಶ ಕಾಲದ 'ಪರ್ಯಾಸವೋ ನಾ ಮಾಡ್ದದೋಷದ ಬಲುಹೊ ತಿಳಿಯದಲ್ಲಾನೀ ಸಲಹೆಂದು ಕೂಗುವದೆನ್ನೊಳುದಿಸಿದುದೇಸು ಭವದ ಸುಕೃತವೊ ಫಲಿಸದಿದೇಕೆ 1ತಂದೆ ತಾುಗಳು ಪುಣ್ಯವೃಂದವ ಮಾಡ್ದವರೆಂದು ಜನರು ಪೇಳುತಿರುವರೂಕಂದನುದಿಸಿದನೆಂತೆಂದು 'ಗ್ಗಿದರಂತೆಕಂಡೆನಲ್ಲಾ ನರಕವನೀ ಋಣಕೆ ಸಿಕ್ಕಿ 2ಜನಿಸಿದ ಮೂರು ವರುಷಕೆ ನಿನ್ನಯದಾಸನೆನುತ ಮಾತುಳನಿಂದ ನುಡಿಸಿದೆಅನವರತವು ನಿನ್ನ ನೆನಹಪಾಲಿಸಿದೆುೀಯನುಭವವೇನೆಂದರೇಕೆ ನುಡಿಯದಿಹೆ 3ತನುವ ದಂಡಿಪೆನೆ 'ಷಯರುಚಿ ಬಿಡದಿದೆವನಿತೆ ಸುತರ ಮೋಹ ಬಿಡದಿದೆಘನವಾದ ಗುರು'ನನುಗ್ರಹ ದೊರೆತಿದೆಋಣಪೈಶಾಚ'ದೊಂದು ಗಣಿಸದಲೆಯುತಿದೆ 4ಮೊರೆಯ ಲಾಲಿಸದೆ ಕೈಬಿಡಬೇಡ ಚಿಕನಾಗಪುರಪತಿ ವೆಂಕಟರಮಣನೆಮರೆಯೊಕ್ಕೆನೈ ತಿಮ್ಮದಾಸ ನಾನೆಲೆ ಜಗದ್ಗುರುವೆ ಶ್ರೀವಾಸುದೇವಾರ್ಯ ದಯಾಬ್ಧಿಯೆ5


ಅಂಬಾ ಮೈದೋರು amba maidoru




ಅಂಬಾ ಮೈದೋರು ಶಾರದಾಂಬಾನಂಬಿದೆ ನಿನ್ನ ಅಂಬಾ ಮೈದೋರು ಶಾರದಾಂಬಾಪತಾಯೆ ಕಮಲಾಸನಜಾಯೆ ನ'ುಸಿದೆ ನಿನ್ನತಾಯೆ ಬಿಡದೆನ್ನನಸೂಯೆ ರಾಗಾದಿಗಳಿಂನೋಯೆ ನೋಡದಿಹರೆ ಮಾಯೆ ಬೇಡಿದವರ'ೀಯೆ ಪಾಪಕರ್ಮಗಳು ಬೇಯೆ ದಾರಿದ್ರವುಸೀಯೆ ಸರ್ವಲೋಕಪ್ರಿಯೆ ಕೃಪಾಲಯೆ 1ಮರತು ನಿನ್ನ ಧ್ಯಾನವ ಬೆರತು ಸತಿಸುತರೊಳು ಕರ್ಮಕಾಮ್ಯವ ಮಾಡಿ ಮರೆತು ಪೋಗಿ ಸುಖವುನರತು ಮೈಯೆಲ್ಲ ಮೋಹತೊರದ ನೊಂದೆನಿದಕೆಹೊರತು ನಾನಿನಿಸು ಪಾಪ ಬರತು ಪೋಗಲಿದರಿತು ಭಕ್ತಿಯ ಭಕ್ತ ಸರಿತೂಕದವನೆ ನೀನು2ಬಂದು ಚಿಕನಾಗಪುರದಿ ನಿಂದು ವರವೆಂಕಟಗಿರಿಚಿಬಂಧು ವಾಸುದೇವಾರ್ಯನೆಂದು ಜನರ ದುರಿತದಂದುಗವಳಿದು ಬಾರೆಂದು ಕರೆದು e್ಞÁನಸಿಂಧು'ನೊಳು ಗೀತಾರ್ಥ'ದೊಂದು ನಿನಗೆ ಸಾಕೆಂದು ಧನ್ಯತೆಯನು ಹೊಂದುಯೆನಿಸಲೆಂದೆಂದೂ 3


ಅಂಜಿಕೆಯಾಗುತಿದೆ ುದನೋಡಿ



ಅಂಜಿಕೆಯಾಗುತಿದೆ ುದನೋಡಿ ಅಂಜಿಕೆಯಾಗುತಿದೆಮಂಜಿನಂದದ ಮಾಯೆ ರಂಜನೆಯಾಗಿ ರಂಜನನರಿಯದಿರೆ ಪಹುಸಿಯೆಂದು ಶ್ರುತಿ ಸಾರ್ದರೂ ತಾನೊಮ್ಮೆ ನಸಿಯದೆ ನಿಜದಂತಿರೆಹೊಸದು ಕಟ್ಟಿದ ಬಲೆ ಹೊದಿಸಿದಂದದಿ ಮತ್ತೂ ಹೊಸಹೊಸತಾಗಿರಲುಹಸಿವು ತೃಷೆಗಳೆಂಬಿವು ದಿನದಿನ ಹಸಗೆಡಿಸುತಲಿರಲುಕುಸುಮಬಾಣನ ಕಾಟ ಕುಸಿಯ ಮೆಟ್ಟಲು ಮನ ಮಸಿಯಾಗಿ ಮುದ್ರಿಸಲು 1
ಪೇಳ್ವದು ಪರತತ್ವವು ಬುದ್ದಿಯ ಬಾಳ್ವಿಕೆ ಬಹು ಬದ್ಧವುಕೋಳ್ವೋದ ಶೂರನ ಕಲಿತನದಂತಿದು ಕೀಳ್ವಾಯಕಿಳೀಯುತಿರೆಕೇಳ್ವರೆ ಮಾರ್ಗವನು e್ಞÁನಿಯು ಕೋಳ್ವಿಡಿಯಲಿ ಬದ್ಧನುಹಾಳ್‍ವಾದದಲಿ ಹೊತ್ತು ಹೋಗುತ ನಿಜವಾಗಿ ಆಳ್ವನನರಿಯದಿರೆ 2
ಯೋಗಿಗಳ್‍ಕಾಣದಿರೆ ಕರ್ಮದ ರಾಗಿಗಳ್ ಕಾಳಾಗಿರೆಭೋಗಿಗಳೆಲ್ಲರು ಭಯದಲ್ಲಿ ಮುಳುಗಿರೆ ರೋಗಗಳ್ ಬಹುವಾಗಿರೆಸಾಗದೆ ಮಾರ್ಗವಿರೆ ಪುನರಪಿ ಪ್ರಾಗನೆ ಪಡೆಯುತಿರೆಹಾಗೆ ವಾಸನೆಯನ್ನು ಹೊದ್ದಿ ಮತ್ತತಿಶಯವಾಗಿಯೆ ವರಕೊಂಡಿರೆ 3ಧರ್ಮವ ಮಾಡದಿರೆ ಮನ ಪಾಪ ಕರ್ಮವ ಕೂಡುತಿರೆದುರ್ಮಾರ್ಗವೆಂದರೆ ದೃಢವಾಗಿ ನಲಿದು ವಿಕರ್ಮಕ್ಕೆ ವೊಡಲಾಗಿರೆಹಮ್ಮನು ನೆಗ್ಗಿದರೆ ಹೋಗದೆ ಬಿಮ್ಮಾಗಿ ಬೆಳೆಯುತಿರೆನೆಮ್ಮುತ ವಿಷಯವ ನೆನೆಯುತಲೀ ಪರಿ ಹೆಮ್ಮೆಯೆ ಹೆಚ್ಚುತಿರೆ 4ಮೊಳೆಯುತ ಮೇಲ್ಮುಟ್ಟಿರೆ ಹಮ್ಮಿದು ಬೆಳೆಯುತ ಬೇರ್ಬಿಟ್ಟಿರೆಕಳಚಿದರ್ಕೆಡದಾಶೆ ಕಾಲ್ಕಟ್ಟಿ ಕೆಡಹಿರೆ ತಳತುದಿ ತೋರದಿರೆಅಳಿಯುವದೆಂದಿಗಿದು ಸುಖ ತಾನು ಹೊಳೆಯುವದೆಂದಿಗದುನಳಿನಾಕ್ಷ ತಿಳುಹಿಸು ನಂಬಿದೆ ತಿರುಪತಿನಿಳಯ ವೆಂಕಟನಾಥನೆ 5ಕಂ||ಎಡೆಬಿಡದನುತಪಿಸುತ ಪದವಿಡಿದೆರಗಿಯೆ ಬಿನ್ನವಿಸಲು ತಿರುಪತಿಯೊಡೆ ಯಂಕಡು ಕರುಣದಿಂದ ಗುರುತನು ವಿಡಿದಭಯವನಿತ್ತ ನುಡಿಯನನುವದಿಸುವೆನಾಂ ಓಂ ಪರಸ್ಮೈಬ್ರಹ್ಮಣೇ ನಮಃ


Thursday 6 February 2020

ಶ್ರೀ ಪುರಂದರದಾಸರಾಯ ನಿಮ್ಮಶ್ರೀ



ಶ್ರೀ ಪುರಂದರದಾಸರಾಯ ನಿಮ್ಮಶ್ರೀ ಪಾದ ಪದ್ಮಕ್ಕೆ ಎರಗುವೆನು ಸಲಹೆಮ್ಮ ಪ
ಸುರಮುನಿಯು ನಾರದರೆ ಹರಿಯಾಜ್ಞದಿಂದ ಶ್ರೀಪುರಂದರಾ ಗಡದಲ್ಲಿ ಅವತರಿಸಿದೆತರುಣಿ ಮಕ್ಕಳು ಕೂಡೆ ಪರಮ ಸೌಖ್ಯದಲಿರುತಹರುಷದಲಿ ಮನೆಧನವ ಭೂಸುರರಿಗರ್ಪಣೆ ಮಾಡ್ದೆ 1
ಆದಿಕಾರಣ ನೀವು ದಾಸಮಾರ್ಗಕೆ ಪ್ರ-ಹ್ಲಾದನವತಾರ ಶ್ರೀ ವ್ಯಾಸಮುನಿಯಾಪಾದಕೆ ನಮಿಸಲುಪದೇಶವನು ಕೈಕೊಂಡುಮೋದತೀರ್ಥರ ಚರಣ ನಾದದಿಂದಲಿ ತುತಿಪೆ 2
ಅದ್ವೈತ ಮತವ ಕಾಲಿಲೊದ್ದು ಶ್ರೀ ಗುರುಮಧ್ವ ಸಿದ್ಧಾಂತವನು ಮಾಡಿದಶುದ್ಧ ಭಕ್ತಿ e್ಞÁನ ವೈರಾಗ್ಯ ಪರರಾಗಿಮಧ್ವ ವಲ್ಲಭನ ಪದ ಹೃದ್ಗುಹದಿ ಪೂಜಿಸುವ 3
ಹರಿ ಸರ್ವೋತ್ತಮನೆಂದು ಧರೆಯೊಳಗೆ ನೀವು ಡಂ-ಗುರವ ಹೊಯ್ಸಿ ಮೆರೆವ ಶ್ರೀ ಗುರುವರ್ಯರೆತರತಮವು ಪಂಚಭೇದ ಸತ್ಯವೆಂದು ಪೇಳಿಹರಿಪುರವ ಸಾರ್ದ ಶ್ರೀ ಪುರಂದರರಾಯ 4
ತತ್ತ್ವ ಶೋಧನ ಮಾಡಿ ತತ್ತ್ವೇಶರನು ತಿಳಿದುತತ್ತತ್ಕಾಲಕೆ ಮಾಳ್ಪ ಕರ್ಮಗಳನಾಉತ್ತಮ ಶ್ಲೋಕ ಪುರುಷೋತ್ತಮನಿಗರ್ಪಿಸಿಮುಕ್ತಿ ಮಾರ್ಗವ ಪಿಡಿದೆ ಅತ್ಯಂತ ಮಹಾಮಹಿಮ 5
ಎರಡ್ಹೊತ್ತು ನಾಲ್ಕು ತತ್ತ್ವದ ವಿಚಾರವಅರುಹು ಹರಿಯೆ ದೈವ ಸಿರಿ ಬ್ರಹ್ಮ ವಾಯುಗರುಡ ಭುಜಂಗ ಮಾರಹರ ಇಂದ್ರ ಸುರರೆಲ್ಲ ತರತಮದಿ ದಾಸರೆಂಬುವ e್ಞÁನ ಕರುಣಿಸುವುದು 6
ದಾಸವರ್ಯರೆ ವಿಜಯದಾಸರಾಯರಿಗುಪದೇಶಿಸಿದ ಪುರಂದರದಾಸರಾಯಶೇಷಗಿರಿವಾಸ ವೆಂಕಟ ವಿಠ್ಠಲನ ನಿಜದಾಸರಾ ದಾಸನೆಂದೆನಿಸೆನ್ನ 7


ವೃಂದಾವನ ನೋಡಿರೋ


ವೃಂದಾವನ ನೋಡಿರೋ - ಗುರುಗಳವೃಂದಾವನ ಪಾಡಿರೋ ಪ
ವೃಂದಾವನ ನೋಡಿ - ಆನಂದ ಮದವೇರಿಚೆಂದದಿ ದ್ವಾದಶ ಪೌಂಡ್ರಾಂಕಿತಗೊಂಬ ಅ.ಪ
ತುಂಗಭದ್ರಾ ನದಿಯ ತೀರದಿ ಇದ್ದತುಂಗ ಮಂಟಪ ಮಧ್ಯದಿಶೃಂಗಾರ ತುಲಸಿ ಪದ್ಮಾಕ್ಷ ಸರಗಳಿಂದಮಂಗಳಕರ ಮಹಾ ಮಹಿಮೆಯಿಂದೊಪ್ಪುವ 1
ದೇಶ ದೇಶದಿ ಮೆಚ್ಚುತ - ಇಲ್ಲಿಗೆ ಬಂದುವಾಸವಾಗಿ ಸೇವಿಪಭಾಷೆ ಕೊಟ್ಟಂದದಿ ಬಹುವಿಧ ವರಗಳಸೂಸುವ ಕರ ಮಹಾಮಹಿಮೆಯಿಂದೊಪ್ಪುವ 2
ನಿತ್ಯ ಸನ್ನಿಧಿ ಸೇವಿಪ - ಭಕ್ತರಿಗೆಲ್ಲಮತ್ತಭೀಷ್ಟವ ಕೊಡುತ ಪತ್ಯಾಧಿಗುಣ ಸಿಂಧು ವೆಂಕಟವಿಠ್ಠಲನ ನಿತ್ಯ ಸನ್ನಿಧಿಯಿಂದ ನಿರುತ ಪೊಜೆಯಗೊಂಬ 3


ಬಿಡುವೇನೇನಯ್ಯಾ ಹನುಮ


ಬಿಡುವೇನೇನಯ್ಯಾ ಹನುಮ ನಿನ್ನಬಿಡುವೇನೇನಯ್ಯಾ ಪ
ಬಿಡುವೆನೇನೋ ಹನುಮ ನಿನ್ನಅಡಿಗಳಿಗೆ ಶಿರವ ಕಟ್ಟಿ (ಎರಗುವೆ ನಾನು)ದೃಢ ಭಕ್ತಿ ಸುe್ಞÁನವನ್ನುತಡಮಾಡದಲೆ ಕೊಡುವೋ ತನಕ ಅ.ಪ
ಹಸ್ತವ ಮ್ಯಾಲಕೆ ಎತ್ತಿದರೇನುಹಾರಗಾಲ ಹಾಕಿದರೇನುಭೃತ್ಯನು ನಿನ್ನವನು ನಾನುಹಸ್ತಿ ವರದನ ತೋರೋ ತನಕ 1
ಹಲ್ಲು ಮುಡಿಯ ಕಟ್ಟಿದರೇನು ಗುಲ್ಲು ಮಾಡಿದರಂಜುವನಲ್ಲಫುಲ್ಲನಾಭ ಲಕುಮೀಲೋಲನಇಲ್ಲಿಗೆ ತಂದು ತೋರುವ ತನಕ 2
ಡೊಂಕು ಮೋರೆ ಬಾಲವ ತಿದ್ದಿಹುಂಕರಿಸಿದರೆ ಅಂಜುವನಲ್ಲಕಿಂಕರನು ನಿನ್ನವನೋ ನಾನುವೆಂಕಟವಿಠಲನ ತೋರುವ ತನಕ 3


ನಂಬಿದೆ ನಾ ನಿನ್ನ ಚರಣಕಮಲವನ್ನು



ನಂಬಿದೆ ನಾ ನಿನ್ನ ಚರಣಕಮಲವನ್ನು ವಿಜಯರಾಯ ಪ
ಬೆಂಬಿಡದೆಲೆ ವಿಷಯ ಹಂಬಲ ಬಿಡಿಸಯ್ಯ ವಿಜಯರಾಯ ಅ.ಪ
ತಾಯಿ ಎಳೆಯ ಶಿಶುವನು ಬಿಟ್ಟಿರುವುದುಂಟೆ ವಿಜಯರಾಯಬಾಯ ಬಿಡುವೆ ನಾ ಭವದಲ್ಲಿ ಸಿಗಬಿದ್ದು ವಿಜಯರಾಯನೋಯಲಾರೆನೂ ಎನ್ನ ಕಾಯೊ ಕರುಣದಿಂದ ವಿಜಯರಾಯಕಾಯ ಮನವು ನಿನ್ನ ಚರಣಕ್ಕೊಪ್ಪಿಸಿದೆನೊ ವಿಜಯರಾಯ 1
ಎತ್ತಗಾಣದೆ ಕರ್ಮ ಕತ್ತಲೆಯೊಳು ಸುತ್ತಿ ವಿಜಯರಾಯ ತತ್ತಳಗೊಳುತಿಪ್ಪೆ ಎತ್ತಿರೊ ಎನ್ನ ವಿಜಯರಾಯಪೆತ್ತ ತಂದೆಗೆ ಮಗ ಭಾರವಾಗುವುದುಂಟೆ ವಿಜಯರಾಯವಿತ್ತ ಭಾಗ್ಯವನೊಲ್ಲೆ ಎಂದೆಂದಿಗೂ ನಾನು ವಿಜಯರಾಯ 2
ತುಂಬಿದ ಭಂಡಾರ ಸಂಪತ್ತು ಎನಗೆಂದು ವಿಜಯರಾಯಹಂಬಲಿಸುತ ಬಲು ಸಂಭ್ರಮದಿರುತಿಪ್ಪೆ ವಿಜಯರಾಯಸಂಬಳಕಾರ ಶಿಷ್ಯ ನಿನಗಲ್ಲ ಕೇಳಯ್ಯ ವಿಜಯರಾಯಬಿಂಬ ಶ್ರೀ ವೆಂಕಟ ವಿಠ್ಠಲನ ತೋರೊ ನೀ ವಿಜಯರಾಯ 3


ಚೆಂದವೇನೇ ಗೋಪಿ


ಚೆಂದವೇನೇ ಗೋಪಿ ಚೆಂದವೇನೇನಿನ್ನ ಮಗನ ದುಡುಕು - ಚೆಂದವೇನೇ ಪ
ಚೆಂದದಿಂದಲಿ ಅರವಿಂದಾಕ್ಷ ಬೆಣ್ಣೆಯ ತಿಂದು ಬೇಗದಿ ಕೃಷ್ಣ ಬಂದೋಡಿ ನಿಂತನೆ 1
ಸದ್ದು ಮಾಡದೆ ಪಾಲು ಕದ್ದು ನಮ್ಮನೆಯೊಳಗಿದ್ದ ಸ್ತ್ರೀಯರನೆಲ್ಲ ಮುದ್ದಾಡಿ ಪೋದನೆ 2
ಚೋರನೆನಿಸಿಕೊಂಬ ಧೀರ ವೆಂಕಟವಿಠ್ಠಲ*ವಾರಿಜಾಕ್ಷನ ಪಾದ ಸೇರಿದೆ ನಾನೀಗ 3


ಗಣಪತೇ ಎನ್ನ ಪಾಲಿಸೋ - ಗಂಭೀರಾ ಪ


ಗಣೇಶ ಸ್ತೋತ್ರ
ಗಣಪತೇ ಎನ್ನ ಪಾಲಿಸೋ - ಗಂಭೀರಾ ಪ
ಪಾರ್ವತಿ ನಂದನ ಸುಂದರ ವದನಶರ್ವಾದಿ ಸುರವಂದ್ಯ ಶಿರಬಾಗುವೆನು 1
ಆದಿ ಪೂಜಿತ ನೀನು ಮೋದ ಭಕುತರಿಗಿತ್ತುಮಾಧವನಲಿ ಮನ ಸದಾ ನಿಲಿಸು ನೀ 2
ಪಂಕಜ ನಯನ ವೆಂಕಟ ವಿಠಲನಕಿಂಕಿರನೆನಿಸೆನ್ನ ಶಂಕರ ತನಯನೆ 3


ಏನು ಕಾರಣವೆನಗೆ



ಏನು ಕಾರಣವೆನಗೆ ತಿಳಿಯಲಿಲ್ಲದೀನ ರಕ್ಷಕನಾದ ಹರಿಯೆ ತಾ ಬಲ್ಲ ಪ
ಕಾನನದೊಳಗೆ ಕಡುತಪಿಸಿ ತೃಷಿಯಾದವಂಗೆತಾನಾಗೆ ಮೋಡೊಡ್ಡಿ ಮೇಘ ಕವಿದುನಾನು ಧನ್ಯನೆಂದು ನರ್ತಿಸುವ ಸಮಯದಲಿಕಾಣದೇ ಪೋಯಿತು ಬಿಂದು ಮಾತ್ರ 1
ವರುಷದಿಂದಲಿ ನಿಮ್ಮ ದರುಶನಾಕಾಂಕ್ಷಿಸಿಪರುಶರಾಮನ ಪಾದ ಭಜನೆಯನ್ನುಹರುಷದಲಿ ಪಾಡಿ ಹಗಲಿರುಳು ಪ್ರಾರ್ಥಿಸುವಂಗೆಪುರುಷಾರ್ಥ ಪೂರೈಸಿ ಬಾರದಿಪ್ಪ ಬಗಿಯು 2
ಅನ್ನಾದಿಯಿಂದ ಅನ್ನಂತ ಜನ್ಮದಿ ಬಂದುಉನ್ನಂತ ಮಾಡಿದ ಪಾಪರಾಶಿ-ಯನ್ನು ಉಣದನಕ ಭೂವನ್ನದೊಳು ಮತ್ತೆ ಪಾ-ವನ್ನರಾ ಪಾದಗಳು ಪಡೆಯಲರಿಯದೊಯೇನೊ 3
ಅನ್ನಾಥ ಬಂಧು ಹರೆಯೆನ್ನುವಾ ಬಿರುದಿಗೆನಿನ್ನಂಥ ಮಹಿಮನಾ ಕರೆದು ವೊಂದೂಎನ್ನಂಥ ಪರಮ ಪಾತಕಿಯನುದ್ಧರಿಸಿತಾ-ಸನ್ನಗೊಳಿಸಿ ಸತತ ಸಲಹದಿಹುದು ಏನು 4
ಅರಸಿನಾಲೋಚನಿಯು ಸತತ ಸನ್ನಿಧಿಯೊಳನು- ಸರಿಸಿದ ಆಳುಗಳು ಬಲ್ಲ ತೆರದಿಸರಸಿಜ ನಯನ ವೆಂಕಟ ವಿಠಲನ ಪಾದಸರಸಿಜದಿ ಸರಸರೊಳು ನಲಿದು ನೀ ಬಾರದಿಹುದು 5


ಎಂದು ಬರುವಳೋ ಗೋ-ವಿಂದನೊಲ್ಲಭೆ



ಎಂದು ಬರುವಳೋ ಗೋ-ವಿಂದನೊಲ್ಲಭೆ ಲಕ್ಷ್ಮೀ ರಂಗನ ಸನ್ನಿಧಿಗೆ ಪ
ಮಂಗಳಾಂಗಿ ಸರ್ವಾಂಗ ಬಳಲಿ ಮುಖಕಂದಿ ಕಳೆಗುಂದಿದಂತೆ | ಬಲು ವ್ಯಥೆಯಂತೆ ಅ.ಪ
ಶೇಷನ ಶಿಖಿ ಮ್ಯಾಲೆವಾಸುದೇವರು ಲಕ್ಷ್ಮೀ ಸಮೇತರಾಗಿರುತಿರಲುಆ ಸಮಯದಿ ಭೃಗುಮುನಿ ಬಂದು ಕೋ-ಪಿಸೆ ಸೋಕಿಸಿದನು ಪಾದವಾ | ವಕ್ಷ ಸ್ಥಳವಾ 1
ಥಟ್ಟನೆ ಇಳಿದಾಳುಸಿಟ್ಟಿನಿಂದಲಿ ಬಹು ಧಿಕ್ಕಾರ ಮಾಡಿದಳುಲಕ್ಷ್ಮೀರಮಣನೆಂಬೊ ಬಿರುದು ನಿಮಗೆ ಈಹೊತ್ತಿಗೆ ಅಲ್ಲೆಂದಾಳು | ತೆರಳಿದಳು 2
ನಿಲ್ಲದೆ ಪೊರಟಾಳುಫುಲ್ಲಾಕ್ಷಿ ಮನದೊಳು ತಲ್ಲಣಿಸುತಿರಲುವಲ್ಲಭನರಿಯದ ಸ್ಥಳವಿಲ್ಲದಿರೆ ತಾಯಿ ಕೊಲ್ಲಾಪುರಕೆ ಬಂದಾಳು | ನೆಲೆಗೊಂಡಾಳು 3
ಜಾತೆ ಬಾಮಾರನ ಮಾತೆ ಬಾ ವಾರಿಜದಳನೇತ್ರೆ ಬಾಮೂರ್ಲೋಕದೊಳಗೆ ನೀ ಪ್ರಖ್ಯಾತೆ ಬಾರೆಂದು ಶ್ರೀಮ-ನ್ನಾರಾಯಣನೆ ಕರೆಯಲು | ನಸುನಗೆಯೊಳು 4
ಜಯ ಲಕ್ಷ್ಮೀರಮಣಗೆಜಯ ಶ್ರೀನಿವಾಸಗೆ ಜಯ ಮೋಕ್ಷದಾಯಕಗೆಜಯತು ಕೊಲ್ಹಾಪುರದೊಳ್ ನೆಲಸಿದವಳಿಗೆಶ್ರೀದೇವಿಯಳಿಗೆ5
ವೆಂಕಟ ವಿಠಲವೈಕುಂಠಪತಿ ಲಕ್ಷ್ಮೀ ಶಾಂತ ಏಕಾಂತದೊಳುಶಂಖಚಕ್ರಧರ ಸರ್ವಮಂಗಳಕಾರಸಂಚಿತಾಗಮದೂರನು ಮಲಗಿರುವನು6


ಇದಿರ್ಯಾರೋ ಗುರುವೆ



ಇದಿರ್ಯಾರೋ ಗುರುವೆ ಸಮರ್ಯಾರೋ ಶ್ರೀ ಹಯವದನ ಪದ ಪ್ರಿಯ ವಾದಿರಾಜ ಪ
ಸಿರಿನಿಲಯನ ಗುಣಗಳ ಸ್ಮರಿಸುತಗುರು ಮಧ್ವ ಮುನಿಪನ ಮಹಿಮೆಯ ಪೊಗಳುತನೆರೆದಿದ್ದ ಮಾಯ್ಮದ ಕರಿಗಳ ಶಿರವನುಭರದಿ ಛೇದಿಪ ಬಲಿ ವಿಬುಧ ಕೇಸರಿಯೆ 1
ಹರಿ ತತ್ತ್ವ ಸಾರ ಸಜ್ಜನರಿಗೆ ತಿಳಿಯದೇಪರಿಪರಿ ಕುಸಮಯ ತಮ ಕವಿಯಲು ನೀಸರಸ ಭಾರತಿ ಮೊದಲಾದ ಗ್ರಂಥಗಳನುವಿರಚಿಸಿ ತಮ ಹರಿಸಿದ ದಿನಕರನೇ 2
ಸೋದೆಯ ಪುರದಲ್ಲಿರುವ ಹಯವದನನಮೋದದಿ ಭಜಿಸುತ ಈ ಧರೆಯೊಳ್ ಪೂರ್ಣಬೋಧ ತೀರ್ಥರ ಪಾದಸೇವಕರಿಗೆಆದರ ಮಾಳ್ಪ ಯತಿಕುಲ ಶಿರೋಮಣಿಯೇ 3
ಮುದ್ದು ಲಕ್ಷ್ಮೀಶ ವೆಂಕಟ ವಿಠ್ಠಲನಹೊದ್ದಿದ ಭಕ್ತರ ಸಂತಾಪ ಕಳೆಯುತ ಮಧ್ವಮುನಿಯ ಮತ ದುಗ್ಧವಾರಿಧಿಯೊಳುಉದ್ಭವಿಸಿದ ಪೂರ್ಣ ಶುದ್ಧ ಚಂದ್ರಮನೇ 4