Labels

Saturday 29 February 2020

ಆಟವಾಡುವ ಕೂಸು ನಾನು aatavaduva kusu naanu



ಆಟವಾಡುವ ಕೂಸು ನಾನು | ಕೃಷ್ಣ
ಕಾಟಬಡಿಸುವೆ ನಿನ್ನ ಸಾಧನವ ನೀಡೊ ಪ.
ಗುರುಗಳು ತಂದು ನಿನಗೊಪ್ಪಿಸಿದರೆಲೊ ದೇವ
ಸರಿಯ ಸಖನೆಂದು ಅನುಗಾಲವೂ
ಸಿರಿಯರಸ ಕೇಳಿನ್ನು ಹಿರಿಯನೆ ನೀನಹುದೊ
ಕಿರಿಯತನದಿಂದ ನಾ ಆಟವಾಡುವೆನೊ 1
ಹೃದಯವೆಂಬೋ ಪುಟ್ಟ ಮನೆಯ ಕಟ್ಟಿ ಅಲ್ಲಿ
ಮುದದಿಂದ ಅಷ್ಟದಳ ಪದುಮ ರಚಿಸಿ
ಒದಗಿ ಬರುತಿಹ ದುಷ್ಟ ಅರಿಗಳನೆ ನುಗ್ಗೊತ್ತಿ
ಪದುಮನಾಭನೆ ನಿನ್ನ ಜೊತೆಯವರೊಡನೆ2
ಡಿಂಬದೊಳಗಿರುತಿಹ ಅಂಬರ ಮಧ್ಯದಲಿ
ಬಿಂಬವೆನ್ನುವ ದಿವ್ಯ ಬೊಂಬೆಯನೆ ಇಟ್ಟು
ಸಂಭ್ರಮದಿ ಶೃಂಗರಿಸಿ ಹಾಡಿ ಪಾಡಿ ಕುಣಿದು
ಆಂಬ್ರಣಿನುತ ನಿನ್ನ ನೋಡಿ ದಣಿಯುವೆನೊ 3
ಪುಂಡರೀಕಾಕ್ಷ ನಿನ್ನ ಕೊಂಡಾÀಡುವೊ ಬಹಳ
ತಿಂಡಿಯನೆ ನೀಡೆನಗೆ ಅನುಗಾಲವೂ
ಭಂಡು ಮಾಡುವರೊ ಬರಿಕೈಲಿದ್ದರೆ ಸಖರು
ಕಂಡು ಕಂಡೂ ನೀನು ಸಮ್ಮನಿರಬೇಡೊ 4
ಎಷ್ಟು ಜನ ಸ್ನೇಹಿತರೊ ಈ ಮನೆಯೊಳೆಲೆ ದೇವ
ಪುಟ್ಟನಾಗಿರುವೆ ನಾನೆಲ್ಲರಿಗೆ ಇನ್ನು
ಕೊಟ್ಟರೆ ಸಲಕರಣೆ ಆಟವಾಡುವೆ ಅಳದೆ
ಶ್ರೇಷ್ಠ ಶ್ರೀ ಗೋಪಾಲಕೃಷ್ಣವಿಠ್ಠಲನೆ 5


No comments:

Post a Comment