ಧರ್ಮ ದೊರಕುವದೇ | ದುಷ್ಕರ್ಮಿಸತ್ತಿಯೊಳು ಪುರುಷಾಧಮನಿಗೆ ಧರ್ಮ ದೊರಕುವದೆ ಪ.
ಧನವಿದ್ದರೇನಯ್ಯ ಮನವಿಲ್ಲವು | ಮನವಿದ್ದರೇನಯ್ಯ ಧನವಿಲ್ಲವು |
ಧನವು ಮನವು ಯರಡುಂಡ್ಯಾದ ಮನುಜಗೆ ಅನುಕೂಲವಾದಂಥ ಸತಿಯಿಲ್ಲವಯ್ಯ 1
ಧರ್ಮಯಾಗ ಮಾಡವ ಧರ್ಮ ನಾಳೆಯಾದೆನಬ್ಯಾಡ ನಾಳ್ಯಾರೊ ನಾವ್ಯಾರೊ ಯಲೊ ಮಾನವಾ | ಊಳಿಗದವ ಬಂದು ಬಾಬಾರೆಂದೆಳವಾಗ ಆಗ ಮಾಡುವೆನೆಂದರೆ ದೊರಕುವುದೇ ಧರ್ಮ2
ಬಾಡಿಗೆ ಮನೆಯಂತೆಯೊ ದೇಹವ ನಚ್ಚಿ ಮಾಡುವೆ ಪರಿಪರಿಯಾಗವನು | ಈ ಬೀಡಬಿಟ್ಟು ಆ ಬೀಡ ಹೋದ ಮೇಲೆ ಆಗ ಮಾಡುವೆನೆಂದರೆ ದೊರಕುವದೆ 3
ತನ್ನ ಕಣ್ಣ ಮುಂದೆ ಹೋಹ ಜೀವವ ಕಂಡು ಇನ್ನು ನಾಚಿಕೆಯಿಲ್ಲವೆ ತನಗೆ | ನನ್ನದು ನನ್ನದುಯೆಂಬ ಭ್ರಾಂತಿಯ ಬಿಟ್ಟು ಕುನ್ನಿ ದೇಹವನಚ್ಚಿ ಕೆಡಬ್ಯಾಡ ಮನುಜ4
ವಂದಾನೊಂದು ಪರಿಯಲ್ಲಿ ತೊಳಲಿ ಬಳಲಿ ಜೀವ ಮುಂದನ ಜನ್ಮಕೆ ಸಾಧನವು ತಂದೆ ಶ್ರೀ ಪುರಂದರ ವಿಠಲರಾಯನನ ಸಂದೇಹವಿಲ್ಲದೆ ನೆನೆ ಕಂಡ್ಯಾ ಮನುಜ 5
No comments:
Post a Comment