Labels

Tuesday, 7 January 2020

ದೇಹ ಮನೇಂದ್ರಿಯವೆಲ್ಲಾ deha maneyindriyavella


ದೇಹ ಮನೇಂದ್ರಿಯವೆಲ್ಲಾ ಆತ್ಮಸಹಾಯದಿ ಚರಿಸುವವೆಲ್ಲಾ ಪ
ಮೂಢರು ತಿಳಿಯರು ಸುಮ್ಮೇ ದೇಹವ ಕೂಡುತೆ ಮಾಡಿತು ಹೆಮ್ಮೆ 1
ವಪು ಜಡವದು ಪ್ರಕಾಶಾ |ಸ್ವರೂಪವಿಡಿದಾಗುವದಾಭಾಸಾ 2
ಪಾವಕನಾಗಿರೆ ಲೋಹವಾಗಿರೆ | ಪಾವಕ ಲೋಹದ ಹತಿಗೆ 3
ಮಾಲಾ ಸರ್ಪವದಾಗೆ |ತೋರದೆ ವ್ಯಾಳೆನಿಸುದು ಮಾಲ್ವೋಗೆ (ಮಾಲೆಹೋಗೆ) 4
ಅಧಿಷ್ಠಾನ ದೃಷ್ಟಿಯಿಂದಾ |ಪ್ರಾಣಿಗೆ ದೊರಕದು ಶಂಕರ ಪದಾ 5


No comments:

Post a Comment