ವಾವೆಯೆಲ್ಲಿಹುದಯ್ಯ ವೈಕುಂಠಪತಿಗೆ |
ದೇವಭಾರ್ಗವನಾಗಿ ಮಾತೆಯ ಶಿರವ ಕಡಿದ ಪ
ಒಬ್ಬ ಮಾವನ ಕೊಂದ, ಒಬ್ಬ ಮಾವನನೆಸೆದ |
ಒಬ್ಬ ಮಾವನ ಕೂಡೆ ಕಡಿದಾಡಿದ ||
ಒಬ್ಬ ಭಾವನ ಹಿಡಿದು ಹೆಡಗೈಯ ಕಟ್ಟಿದನು |
ಒಬ್ಬ ಭಾವಗೆ ಬಂಡಿ ಬೋವನಾದ 1
ಕುಂಭಿನಿಗೆ ಪತಿಯಾದ ಕುಂಭಿನಿಗಳಿಯನಾದ |
ಕುಂಭಿನೀಪತಿಯ ಸಂಹಾರ ಮಾಡಿದ ||
ಅಂಬುಧಿಗೆ ಪಿತನಾದ ಅಂಬುಜೆಗೆ ಪತಿಯಾದ |
ಅಂಬುಜಾಸನಗೆ ತಾ ಸ್ವಾಮಿಯಾದ 2
ಮೊಮ್ಮನನು ಮಲಗಿಸಿದ ಅವನ ಹೆಮ್ಮಕ್ಕಳನು |
ಇಮ್ಮೆಯ್ಯವರಿತು ಸಂಹಾರ ಮಾಡಿದ- ||
ರಮ್ಯ ಮೂರುತಿ ಪುರಂದರವಿಠಲ ದೇವೇಶ |ಬೊಮ್ಮಮೂರುತಿಗೆಲ್ಲಿ ಬಂಧು ಬಳಗ3
No comments:
Post a Comment