Labels

Wednesday, 18 December 2019

ಸಂಸಾರವೆಂಬ ಸಾಗರವನುತ್ತರಿಸುವರೆ sansarvemba sagara

ಸಂಸಾರವೆಂಬ ಸಾಗರವನುತ್ತರಿಸುವರೆ
ಕಂಸಾರಿಯೆಂಬ ನಾಮವೊಂದೆ ಸಾಕು ಮರುಳೆ ಪ.
ಯತಿಯಾಗಬೇಡ ವೈರಾಗ್ಯವರಿತು ಸಕಲ
ವ್ರತವ ಮಾಡುವೆನೆಂಬ ನೇಮ ಬೇಡ ||
ಶ್ರುತಿ - ಸ್ಮøತಿಗಳನರಿತು ನಡೆವೆನೆನಬೇಡ ಶ್ರೀ -
ಪತಿಯ ಶ್ರೀನಾಮವೊಂದೆ ಸಾಕು ಮರುಳೆ 1
ತನುವ ದಂಡಿಸಿ ತುದಿಯ ಕೋಡುಗಲ್ಲಿನ ಮೇಲೆ
ವನಿತೆಯನು ಬಿಟ್ಟು ತಪವಿರಲು ಬೇಡ ||
ಅನುವರಿತು ನೀರೊಳಗೆ ಬಿಡದೆ ಮುಳುಗಲುಬೇಡ |
ವನಜಾಕ್ಷ ನಾಮವೊಂದೇ ಸಾಕು ಮರುಳೆ 2
ತೀರ್ಥಯಾತ್ರೆಗೆ ನೀನು ತಿರುಗಿ ಝೊಂಪಿಸಿ ಕೃ - ತಾರ್ಥನಾದೆನೆಂಬ ಹೆಮ್ಮೆ ಬೇಡ ||
ಧೂರ್ತಭಂಜನ ನಮ್ಮ ಪುರಂದರವಿಠಲ ಸಂ -
ಕೀರ್ತಿನೆಯ ಮಾಡಿ ಮೋಕ್ಷವನೈದು ಮರುಳೆ ** 3

No comments:

Post a Comment