Labels

Monday, 7 October 2019

ಯನ್ನನನ್ಯನಾ yannanannyana

 ಯೋಗೇಂದ್ರ ತೀರ್ಥರು ರಚಿಸಿದ ರಾಮನ ಹಾಡು

ಯನ್ನನನ್ಯನಾ ಮಾಡಿ ನೋಡದೆ ಪಾಲಿಸಾ ಬೇಕೋ ।
ನಿನ್ನ ಮನದಲಿಟ್ಟರೆ ಸಾಕೋ ।। ಪ।।
ದುರಂತ ದುರಿತಾ । ರಾ ।
ಶಿ ರೂಪಾ ನಾನಾದಾಡೇನು ನಿನ್ನ ಪಾದ ।
ಸರಸೀರುಹ ಸ್ಮರಣೆ ಮಾಡಲು।
ದುರಿತಾ ಉಂಟೆ ।।
ತರಣಿ ಕಿರಣಾ ಧರಣಿ ವ್ಯಾಪಿಸೆ ।
ಘೋರ ತಿಮಿರಾ ದೂರಾವಲ್ಲದೆ ।
ಕರುಣದಿಂದಲಿ ಕಾಯದಿದ್ದಡೆ ।
ಶರಣರಾರೋ ನೀನೇ ಪೇಳೋ ।। 1 ||
ಕರ್ಮ ಕಾಲಾ ಕಾಮ ।
ವಿಮತಿ ಸರ್ವ ಕಾರಣಂಗಳು ।
ಹರಿಯೇ ನಿನ್ನ ತಂತ್ರವಲ್ಲದೆ ಸ್ವತಂತ್ರ ನೀನೆ ।।
ಪ್ರೇರಕನಾಗಿ ಕರ್ಮಫಲವು ಕ್ಯಲವನುಣಿಸಿ ಕ್ಯಲವನಳಿಸಿ ।
ಹರಿಯೇ ನಿನ್ನ ದರುಶನವಾನಿತ್ತು
ದೀನ ಜನರನ ಸಾಕುವಿಯಾಗಿ ।। 2 ।।
ಮೀನ ಕೂರ್ಮ ವರಾಹ ।
ಶ್ರೀ ನರಾಸಿಂಹ ವಾಮನ ।
ವಾನಾನಿ ರಾಮ ಕೃಷ್ಣ ಬುದ್ಧ ಕಲ್ಕ್ಯಾದಿ ।।
ಅನೇಕ ರೂಪನಾಗಿ । ಚತು ।
ರಾನನಾದಿ ಭಕುತರಿಗೆ ।
ಜ್ಞಾನವಿತ್ತು ರಕ್ಷಿಸಿ ನೀ ।
ಮಾನಾದಾನೆ ಸಿರಿರಾಮ ।।3||

No comments:

Post a Comment