ವಾದಿರಾಜ ಮುನಿಪಾ ಹಯಮುಖ
ಪಾದಕಮಲ ಮಧುಪಾ ||ಪ||
ಪಾದಕಮಲ ಮಧುಪಾ ||ಪ||
ನೀ ದಯದಲಿ ತವ ಪಾದ ಧ್ಯಾನವನು
ಆದರದಲಿ ಕೊಟ್ಟಾದರಿಸೆನ್ನನು ||ಅ.ಪ||
ಆದರದಲಿ ಕೊಟ್ಟಾದರಿಸೆನ್ನನು ||ಅ.ಪ||
ಮೂಷಕ ಬಿಲದಿಂದ ಉದರಪೋಷಕ ಬರಲಂದು
ವಾಸುಕಿ ಭಯದಿ ನಿಮ್ಮಾಸನದೆಡೆ ಬರೆ
ಕ್ಲೇಶ ಕಳೆದು ಸಂತೋಷಗೈಸಿದೆ ||೧||
ವಾಸುಕಿ ಭಯದಿ ನಿಮ್ಮಾಸನದೆಡೆ ಬರೆ
ಕ್ಲೇಶ ಕಳೆದು ಸಂತೋಷಗೈಸಿದೆ ||೧||
ಮುಂದೆ ಭೂತನರನಾ ಪ್ರೇರಿಸಿ
ಹಿಂದೆ ಒಬ್ಬ ನರನಾ
ನಿಂದಿರಿಸಿದೆ ಆನಂದದಿಂದ ಜನ
ವೃಂದ ನೋಡುತಿರೆ ಅಂದಣ ನಡಿಸಿದ್ಯೋ ||೨||
ಹಿಂದೆ ಒಬ್ಬ ನರನಾ
ನಿಂದಿರಿಸಿದೆ ಆನಂದದಿಂದ ಜನ
ವೃಂದ ನೋಡುತಿರೆ ಅಂದಣ ನಡಿಸಿದ್ಯೋ ||೨||
ಕ್ಷಿತಿಯೊಳು ಸತಿ ತನ್ನಾ ವಲ್ಲಭ
ಮೃತಿಯೈದಿರೆ ಮುನ್ನಾ
ಅತಿಶೋಕದಿ ಬಂದು ನುತಿಸಲು ಆ
ಪತಿಯನು ಬದುಕಿಸಿ ಹಿತದಿ ರಕ್ಷಿಸಿದೆ ||೩||
ಮೃತಿಯೈದಿರೆ ಮುನ್ನಾ
ಅತಿಶೋಕದಿ ಬಂದು ನುತಿಸಲು ಆ
ಪತಿಯನು ಬದುಕಿಸಿ ಹಿತದಿ ರಕ್ಷಿಸಿದೆ ||೩||
ನರಪತಿ ವ್ಯಾಧಿಯಲಿ ಬಳಲ್ವದ
ತ್ವರಿತದಿ ನೀ ಕೇಳಿ
ಹರುಷದಿ ವ್ಯಾಧಿಯ ಪರಿಹರಿಸ್ಯವನಿಗೆ
ಹರುಷದಿಂದಲಭಯದ ತೋರಿದೆ ||೪||
ತ್ವರಿತದಿ ನೀ ಕೇಳಿ
ಹರುಷದಿ ವ್ಯಾಧಿಯ ಪರಿಹರಿಸ್ಯವನಿಗೆ
ಹರುಷದಿಂದಲಭಯದ ತೋರಿದೆ ||೪||
ಶಾಸ್ತ್ರ ಪ್ರಸಂಗದಲಿ ನಾರಾಯಣ ಭೂತರ ಗೆಲಿದಲ್ಲೆ
ಖ್ಯಾತಿಯಿಂದ ಬಹು ಮಾತನಾಡಿ ಶ್ರೀ
ನಾಥನ ಮಂದಿರ ಪ್ರೀತಿಲಿ ತರಿಸಿದ್ಯೋ ||೫||
ಖ್ಯಾತಿಯಿಂದ ಬಹು ಮಾತನಾಡಿ ಶ್ರೀ
ನಾಥನ ಮಂದಿರ ಪ್ರೀತಿಲಿ ತರಿಸಿದ್ಯೋ ||೫||
ತುರಗವದನ ಪಾದಾ ಭುಜಗಳಲಿ
ಧರಿಸಿಕೊಂಡು ಮೋದ ಕಡಲೆ ಮಡ್ಡಿಯನು
ಕರದಿಂದುಣಿಸಿದ ಗುರುವರ ಶೇಖರ ||೬||
ಧರಿಸಿಕೊಂಡು ಮೋದ ಕಡಲೆ ಮಡ್ಡಿಯನು
ಕರದಿಂದುಣಿಸಿದ ಗುರುವರ ಶೇಖರ ||೬||
ಆ ಮಹಾ ಗೋಪಾಲವಿಠ್ಠಲ ತಾಮರಸದಳಗಳ
ಧೀಮಂತರಿಗೆ ಸುಕಾಮಿತವನುಕೊಡುವ
ಆ ಮಹಾಮಹಿಮ ||೭||
ಧೀಮಂತರಿಗೆ ಸುಕಾಮಿತವನುಕೊಡುವ
ಆ ಮಹಾಮಹಿಮ ||೭||
No comments:
Post a Comment