Labels

Monday, 7 October 2019

ಹೊಸಗಣ್ಣು hosagannu

ಹೊಸಗಣ್ಣು ಎನಗೆ ಹಚ್ಚಲಿಬೇಕು ಜಗದಂಬಾವಸುದೇವ ಸುತನ ಕಾಂಬುವೆನು |ಪ|
ಘಸಣಿಯಾಗುವೆ ಭವ ವಿಷಯ ವಾರುಧಿಯೊಳಗೆಶಶಿಮುಖಿಯೆ ಕರುಣದಿ ಕಾಯೆ |ಅ.ಪ|
ಪರರ ಅನ್ನವನುಂಡು ಪರರ ಧನವನು ಕಂಡುಪರಿ ಪರಿಯ ಕ್ಲೇಶಗಳನುಂಡು
ವರಲಕ್ಷ್ಮೀ ನಿನ್ನ ಚಾರು ಚರಣಗಳ ಮೊರೆ ಹೊಕ್ಕೆಕರುಣದಿ ಕಣ್ಣೆತ್ತಿ ನೋಡೆ ||
ಮಂದಹಾಸವೇ ಭವಸಿಂಧುವಿನೊಳಗಿಟ್ಟುಚಂದವೇ ಎನ್ನ ನೋಡುವುದು
ಕಂದನಂದದಿ ಬಾಲ್ಯದಿಂದ ಸೇರಿದೆ ನಿನ್ನಮಂದರಧರನ ತೋರಮ್ಮ ||
ಅಂದಚಂದಗಳೊಲ್ಲೆ ಬಂಧು ಬಳಗ ಒಲ್ಲೆಬಂಧನಕೆಲ್ಲ ಇವು ಕಾರಣವು
ಇಂದಿರೇಶನ ಪಾದದ್ವಂದ್ವವ ತೋರಿ ಹೃನ್ಮಂದಿರದೊಳು ಬಂದು ಬೇಗ ||

No comments:

Post a Comment