ಗುರುಗಳನನುದಿನ ನೆನೆವೆ ನಾ
ದುರಿತ ದಟ್ಟುಳಿ ಸಾರೆ ಬಂದೀತಿನ್ನೇನಾ || ಪ ||
ದುರಿತ ದಟ್ಟುಳಿ ಸಾರೆ ಬಂದೀತಿನ್ನೇನಾ || ಪ ||
ಪಾರ್ಥ ರಕ್ಷಕನ ಸೇ ವಾರ್ಥ ಖಳರ ಕೊಂದು
ಕೀರ್ತಿ ಪಡೆದ ಸುಖ ತೀರ್ಥರೆಂತೆಂಬಾ || 1 ||
ಕೀರ್ತಿ ಪಡೆದ ಸುಖ ತೀರ್ಥರೆಂತೆಂಬಾ || 1 ||
ನೀ ಪಾಲೀಸೆಂದೆನಲಾಪತ್ತು ಬಿಡಿಸುವ
ಮಾಪತಿ ನಿಜದೂತ ಶ್ರೀ ಪದ್ಮನಾಭ || 2 ||
ಮಾಪತಿ ನಿಜದೂತ ಶ್ರೀ ಪದ್ಮನಾಭ || 2 ||
ಕರಿಪತಿ ಬಳಿಯಿಂದ ಧರಿಜ ಪತಿಯ ತಂದು
ಗುರುಗಳಿಗಿತ್ತೀಹ ನರಹರಿ ತೀರ್ಥಾ || 3 ||
ಗುರುಗಳಿಗಿತ್ತೀಹ ನರಹರಿ ತೀರ್ಥಾ || 3 ||
ಬಾದರಾಯಣ ದಿವ್ಯ ಪಾದ ಜಲಜ ಭೃಂಗ
ಭೂದೇವ ವಂದಿತ ಮಾಧವ ತೀರ್ಥ || 4 ||
ಭೂದೇವ ವಂದಿತ ಮಾಧವ ತೀರ್ಥ || 4 ||
ಇಕ್ಷುಚಾಪನ ಮ್ಯಾಳ ಲಕ್ಷ್ಮೀ ಇಲ್ಲದೆ ಬಲು
ಪೇಕ್ಷೆ ಮಾಡಿದ ಅಕ್ಷೊಭ್ಯ ಮುನಿಪ || 5 ||
ಪೇಕ್ಷೆ ಮಾಡಿದ ಅಕ್ಷೊಭ್ಯ ಮುನಿಪ || 5 ||
ದಯಮಾಡಿರೆಂದು ವಿ ನಯದಿಂದ ಭಜಿಪರ
ಬಯಕೀ ಪೂರೈಸುವ ಜಯತೀರ್ಥರೆಂಬ || 6 ||
ಬಯಕೀ ಪೂರೈಸುವ ಜಯತೀರ್ಥರೆಂಬ || 6 ||
ಅದ್ವೈತ ಗಜ ಸಿಂಹ ಮಧ್ವ ಮತೋದ್ಭವ
ಸದ್ವೈಷ್ಣವ ಪ್ರೀಯ ವಿದ್ಯಾಧಿರಾಜ || 7 ||
ಸದ್ವೈಷ್ಣವ ಪ್ರೀಯ ವಿದ್ಯಾಧಿರಾಜ || 7 ||
ಸಂದೇಹವಿಲ್ಲದೇ ವಂದೀಪ ಜನರಾಸೆ
ತಂದುಕೊಡುವ ದಯ ಸಿಂಧು ಕವೀಂದ್ರಾ || 8 ||
ತಂದುಕೊಡುವ ದಯ ಸಿಂಧು ಕವೀಂದ್ರಾ || 8 ||
ರಾಗ ವರ್ಜಿತ ಭಾಗವತರ ಪಾಲ
ಯೋಗಿ ಶಿರೋಮಣಿ ವಾಗೀಶ ಮುನಿಪ || 9 ||
ಯೋಗಿ ಶಿರೋಮಣಿ ವಾಗೀಶ ಮುನಿಪ || 9 ||
ಸಾರಿದ ಭಕುತರ ಘೋರಿಪ ಅಘಗಳ
ದೂರ ಓಡಿಸುತಿಪ್ಪ ಶ್ರೀ ರಾಮಚಂದ್ರ || 10 ||
ದೂರ ಓಡಿಸುತಿಪ್ಪ ಶ್ರೀ ರಾಮಚಂದ್ರ || 10 ||
ಕು ಭವದೊಳಿರುವಾರ ಸೊಬಗಿನಿಂದಲಿ ನೋಡಿ
ಅಭಯ ಕೊಡುತಿಪ್ಪ ವಿಬುಧೇಂದ್ರ ತೀರ್ಥ || 11 ||
ಅಭಯ ಕೊಡುತಿಪ್ಪ ವಿಬುಧೇಂದ್ರ ತೀರ್ಥ || 11 ||
ಭ್ರಾಮಕ ಜನ ಶಿಕ್ಷ ಧೀಮಂತ ಜನ ಪಕ್ಷ
ಹೇಮ ವರಣಾಂಗ ಜಿ ತಾಮಿತ್ರ ಮುನಿಪಾ || 12 ||
ಹೇಮ ವರಣಾಂಗ ಜಿ ತಾಮಿತ್ರ ಮುನಿಪಾ || 12 ||
ಬಗೆ ಬಗೆ ಭಜಿಸಲು ಇಗಡ ಜನರನೊಲ್ಲ
ಬಗಿವಾನು ಸುಜನರ ರಘುನಂದನಾರ್ಯ || 13 ||
ಬಗಿವಾನು ಸುಜನರ ರಘುನಂದನಾರ್ಯ || 13 ||
ಪೊಂದಿದವರ ನೋಯ ದಂದದಿ ಸಲಹುವ
ಎಂದೆಂದು ಬಿಡದ ಶ್ರೀ ಸು ರೇಂದ್ರಾಖ್ಯ ಮುನಿಪ || 14 ||
ಎಂದೆಂದು ಬಿಡದ ಶ್ರೀ ಸು ರೇಂದ್ರಾಖ್ಯ ಮುನಿಪ || 14 ||
ನಿಜಭಕ್ತಿಯಲಿ ಪಾದ ಭಜಿಸುವ ಅಗಣಿತ
ಸುಜನರ ಸಲಹುವ ವಿಜಯಿಂದ್ರ ಮುನಿಪ || 15 ||
ಸುಜನರ ಸಲಹುವ ವಿಜಯಿಂದ್ರ ಮುನಿಪ || 15 ||
ವೀಂದ್ರ ವಾಹನ ಯಾದ ವೇಂದ್ರಾಂಘ್ರಿ ಭಜಿಸುವ
ಸಾಂದ್ರ ಭಕ್ತಿಯಲಿ ಸು ಧೀಂದ್ರಾಖ್ಯ ಮುನಿಪಾ || 16 ||
ಸಾಂದ್ರ ಭಕ್ತಿಯಲಿ ಸು ಧೀಂದ್ರಾಖ್ಯ ಮುನಿಪಾ || 16 ||
ಧಾರುಣಿಯೊಳಗತಿ ಚಾರು ವೃಂದಾವನ
ದೀ ರಾಜಿಸುತಿಪ್ಪ ಶ್ರೀ ರಾಘವೇಂದ್ರಾ || 17 ||
ದೀ ರಾಜಿಸುತಿಪ್ಪ ಶ್ರೀ ರಾಘವೇಂದ್ರಾ || 17 ||
ಶ್ಲಾಘೀನ ಗುಣನಿಧಿ ಮಾಗಧ ರಿಪು ದಾಸ
ರಾಘವೇಂದ್ರರ ಪುತ್ರ ಯೋಗೀಂದ್ರ ತೀರ್ಥ || 18 ||
ರಾಘವೇಂದ್ರರ ಪುತ್ರ ಯೋಗೀಂದ್ರ ತೀರ್ಥ || 18 ||
ವೈರಾಗ್ಯ ಗುಣದಿಂದ ಮಾರಾರೀಯಂದದಿ
ತೋರುವರನು ದಿನ ಸೂರೀಂದ್ರ ತೀರ್ಥ || 19 ||
ತೋರುವರನು ದಿನ ಸೂರೀಂದ್ರ ತೀರ್ಥ || 19 ||
ಕುಮತವೆಂಬಗಣೀತ ತಿಮಿರ ಓಡಿಸುವಲ್ಲಿ
ಕಮಲಾಪ್ತನಂತೀಹ ಸುಮತೀಂದ್ರ ತೀರ್ಥ || 20 ||
ಕಮಲಾಪ್ತನಂತೀಹ ಸುಮತೀಂದ್ರ ತೀರ್ಥ || 20 ||
ಸಲ್ಲಾದ ಸುಖಗಳ ನೆಲ್ಲಾವು ಜರಿದು ಶ್ರೀ
ನಲ್ಲಾನ ಭಜಿಸಲು ಬಲ್ಲ ಉಪೇಂದ್ರಾ || 21 ||
ನಲ್ಲಾನ ಭಜಿಸಲು ಬಲ್ಲ ಉಪೇಂದ್ರಾ || 21 ||
ಮೋದ ಮುನಿ ಮತ ಮ ಹೋದಧಿ ಚಂದ್ರ ವಿ
ದ್ಯಾದಿ ದಾನಾಸಕ್ತ ವಾದೀಂದ್ರ ತೀರ್ಥ || 22 ||
ದ್ಯಾದಿ ದಾನಾಸಕ್ತ ವಾದೀಂದ್ರ ತೀರ್ಥ || 22 ||
ಬಿಸಜನಾಭನ ದೂತ ವಸುಧಿಯೊಳಗೆ ಖ್ಯಾತ
ಕಿಸಲಯೋಪಮ ಪಾದ ವಸುಧೀಂದ್ರ ತೀರ್ಥ || 23 ||
ಕಿಸಲಯೋಪಮ ಪಾದ ವಸುಧೀಂದ್ರ ತೀರ್ಥ || 23 ||
ಪರ ಮತೋರಗ ವೀಪ ಕರುಣಿ ವಿಗತ ಕೋಪ
ವರ ವೇದ ಸುಕಲಾಪ ವರದೇಂದ್ರ ಭೂಪ || 24 ||
ವರ ವೇದ ಸುಕಲಾಪ ವರದೇಂದ್ರ ಭೂಪ || 24 ||
ವಿರಕ್ತಿ ಮತಿ ಪಾಲಿಪ ವಾದಿ ವಿಜಯ ಧೀರ
ವರದಾ ತೀರಸ್ಥ ಧೀರೇ೦ದ್ರ ತೀರ್ಥ || 25 ||
ವರದಾ ತೀರಸ್ಥ ಧೀರೇ೦ದ್ರ ತೀರ್ಥ || 25 ||
ಸುವಿವೇಕಿಗಳಿಗಿಷ್ಟ ತವಕದಿಂದಲಿ ಈವ
ಕವಿಭಿರೀಡಿತ ಪಾದ ಭುವನೇಂದ್ರ ತೀರ್ಥ || 26 ||
ಕವಿಭಿರೀಡಿತ ಪಾದ ಭುವನೇಂದ್ರ ತೀರ್ಥ || 26 ||
ಶಬರೀ ವಲ್ಲಭನಂಘ್ರಿ ಅಬುಜಾಳಿ ಸೂರ್ಯ ಸ
ನ್ನಿಭ ವಾದಿ ಗಜಸಿಂಹ ಸುಬೋಧೇಂದ್ರ ತೀರ್ಥ || 27 ||
ನ್ನಿಭ ವಾದಿ ಗಜಸಿಂಹ ಸುಬೋಧೇಂದ್ರ ತೀರ್ಥ || 27 ||
ಪ್ರಾಣೇಶ ವಿಠಲನ ಕಾಣಬೇಕಾದರೆ
ಈ ನಮ್ಮ ಗುರುಗಳ ಧ್ಯಾನದೊಳಿಹದೂ || 28 ||
ಈ ನಮ್ಮ ಗುರುಗಳ ಧ್ಯಾನದೊಳಿಹದೂ || 28 ||
No comments:
Post a Comment