ಎಂಥ ಚೆಲುವೆಗೆ ಮಗಳನು ಕೊಟ್ಟನುಗಿರಿರಾಜನು ನೋಡಮ್ಮಮ್ಮ |
ಕಂತುಹರಶಿವ ಚೆಲುವನೆನ್ನುತ ಮೆಚ್ಚಿದನೇ ನೋಡಮ್ಮಮ್ಮ||
ಮನೆಯೆಂಬುದು ಸ್ಮಶಾನವು ನೋಡೇಗಜಚರ್ಮಾಂಬರವಮ್ಮಮ್ಮ |
ಹಣವೊಂದೆಂಬುದು ಕೈಯೊಳಗಿಲ್ಲವುಕಪ್ಪರವಿದೆ ನೋಡಮ್ಮಮ್ಮ ||
ಹಣವೊಂದೆಂಬುದು ಕೈಯೊಳಗಿಲ್ಲವುಕಪ್ಪರವಿದೆ ನೋಡಮ್ಮಮ್ಮ ||
ಮೋರೆಗಳೈದು-ಮೂರು ಕಣ್ಣಗಳುವಿಪರೀತವ ನೋಡಮ್ಮಮ್ಮ
ಘೋರವಾದ ರುಂಡಮಾಲೆಉರಗಭೂಷಣವನು ನೋಡಮ್ಮಮ್ಮ ||
ಘೋರವಾದ ರುಂಡಮಾಲೆಉರಗಭೂಷಣವನು ನೋಡಮ್ಮಮ್ಮ ||
ಭೂತ ಪ್ರೇತ-ಪಿಶಾಚಿಗಳೆಲ್ಲಾ ಪರಿವಾರವು ನೋಡಮ್ಮಮ್ಮ |
ಈತನ ನಾಮವು ಒಂದೇ ಮಂಗಳಕರವುಹರನ ನೋಡಮ್ಮಮ್ಮ ||
ಈತನ ನಾಮವು ಒಂದೇ ಮಂಗಳಕರವುಹರನ ನೋಡಮ್ಮಮ್ಮ ||
ತಲೆಯೆಂಬುದು ನೋಡಿದರೆ ಜಡೆಯುಹೊಳೆಯುತಿದೆ ನೋಡಮ್ಮ
ಮ್ಮಹಲವು ಕಾಲದ ತಪಸಿ ರುದ್ರನಮೈಬೂದಿಯು ನೋಡಮ್ಮಮ್ಮ ||
ಮ್ಮಹಲವು ಕಾಲದ ತಪಸಿ ರುದ್ರನಮೈಬೂದಿಯು ನೋಡಮ್ಮಮ್ಮ ||
ನಂದಿವಾಹನನ ನೀಲಕಂಠನ ನಿರ್ಗುಣನನು ನೋಡಮ್ಮಮ್ಮ
ಇಂದಿರೆರಮಣನ ಪುರಂದರವಿಠಲನಹೊಂದಿದವನ ನೋಡಮ್ಮಮ್ಮ||
ಇಂದಿರೆರಮಣನ ಪುರಂದರವಿಠಲನಹೊಂದಿದವನ ನೋಡಮ್ಮಮ್ಮ||
No comments:
Post a Comment