Labels

Thursday, 2 January 2020

ಮುರಳಿಧರನು ಕೊಳಲನೂದುವmuralidharanu kolanuduva


ಮುರಳಿಧರನು ಕೊಳಲನೂದುವ ಸೊಬಗ
ನೋಡಿದ್ಯಾ ಮನವೇ ಪ.
ನಾರಿಯರ ಮನವಾ ಸೆಳೆದು ಊದುತಲಿರುವನು ಅ.ಪ.
ಇಂದು ಈ ಗೋವಿನ ಆನಂದವ ನೋಡಿದ್ಯಾ
ಇಂದಿರೇಶನ ಪಾದಾಮೃತ ಸವಿಯುತಿರುವುದು 1
ಕಾಮಧೇನು ಕಲ್ಪವೃಕ್ಷದ ಕಾಯ ಜನಕನ
ಕೊಳಲ ಧ್ವನಿಯು ಕೇಳುತಲಿರುವುದು 2
ರಮಾವಲ್ಲಭ ವಿಠಲನು ಮುರಳಿಸ್ವರದಿಂದ
ಮಾರ ಜನಕ ರಾಗದಿಂದ ಊದುತಲಿರುವನು 3


No comments:

Post a Comment