Labels

Thursday, 2 January 2020

ಬಾರಯ್ಯ ಎನ್ನ ಹೃದಯ ಮಂದಿರಕ್ಕೆ baarayya enna hriday mandirakke

ಬಾರಯ್ಯ ಎನ್ನ ಹೃದಯ ಮಂದಿರಕ್ಕೆ
ತೋರೈಯ್ಯ ಚರಣವ ಕ್ಷೀರಾಬ್ಧಿಶಯನಾ ಪ.
ಒಂದೂ ಅರಿಯದ ಮಂದಮತಿಯ
ಬಂದೂ ನೀ ಕಾಯೋ ಸಿಂಧುಶಯನನೇ 1
ವಾರಿಧಿ ತಂದೆ ಕ್ಷೀರಾಬ್ಧಿ ಶಯನಾ
ಪಾರು ಕಾಣಿಸಯ್ಯ | ಮಾರಾನಾಪಿತನೇ 2
ಶೇಷಾದ್ರಿ ವಾಸಾ ವಾಸುಕೀಶಯನಾ
ರಮಾವಲ್ಲಭ ವಿಠಲ ಪೊರೆಯನ್ನ3

No comments:

Post a Comment