Labels

Friday, 3 January 2020

ಧನ್ಯನಾದೆನಾ ಗುರು dhanyanaadeno guru


ಧನ್ಯನಾದೆನಾ ಗುರು ಪ
ಸನ್ನುತಾಂಗ ಗುರುರಾಜರ ನೋಡಿಅ.ಪ
ಘನ್ನ ಮಹಿಮರಿವರು | ವರ ಪಾವನ್ನಚರಿತರಿವರು |
ಮುನ್ನ ಮಾಡಿದಪರಾಧಗಳೆಣಿಸದೆ| ಉನ್ನತ
ಸುಖಗಳನೀವರ ನೋಡಿ 1
ಬುಧರ ಮಹಾತ್ಪ್ರಭುವೋ| ಭಜಿಪರ ಮಧುರ ಸುರದ್ರುಮವೋ|
ಸುಧೆಗೆ ಪರಿಮಳವ ರಚಿಸಿದ ವಸುಧೆಯೊಳು|
ಅಧಮರ ಮುರಿದಿಹ ಧೀರರ ನೋಡಿ2
ಶ್ರೀಶ ಕೇಶವನ್ನ | ಮನದೊಳುಪಾಸನೆಗೈವರನು |
ಭಾಸುರಾಂಗ ಯತಿರಾಘವೇಂದ್ರರನು| ಈ ಸಮಯದಿ
ಕೊಂಡಾಡುತೆ ನೋಡಿ3


No comments:

Post a Comment