Labels

Friday, 3 January 2020

ತುಂಗಾತೀರದಿ ನೆಲಸಿಹಗೆ tunga teeradi nelasihaga


ತುಂಗಾತೀರದಿ ನೆಲಸಿಹಗೆ |
ಮಂಗಳ ಗುರು ರಾಘವೇಂದ್ರನಿಗೆ |
ಗಂಗಾಜನಕನ ಭಕುತ ಶ್ರೇಷ್ಠ ಯತಿ |
ಪುಂಗವನೆನಿಸುತೆ ಮೆರೆವವಗೆ ||ಮಂಗಳಂ ಜಯ ಮಂಗಳಂ|| ಪ
ದಾವಣಗೆರೆಯೊಳು ನಿಂದವಗೆ|
ಕೋವಿದ ಭೂಸುರ ಸೇವ್ಯನಿಗೆ|
ಧಾವಿಸಿ ಬರುತಿಹ ದೀನಜನಾಳಿಗೆ|
ದೇವ ತರುವಿನಂತೀವನಿಗೆ ||ಮಂಗಳಂ ಜಯ ಮಂಗಳಂ|| 1
ಮಧ್ವಶಾಸ್ತ್ರ ಪಠಿಸಿರುವವಗೆ |
ಶುದ್ಧ ಟೀಕೆಗಳ ರಚಿಸಿದಗೆ|
ಸದ್ವೈಷ್ಣವ ಸುಪ್ರೀತನಿಗೆ ಪರಿ |
ಶುದ್ಧ ಮೂರ್ತಿ ರಾಘವೇಂದ್ರನಿಗೆ ||ಮಂಗಳಂ ಜಯ ಮಂಗಳಂ|| 2
ಶ್ರೀ ಸುಧೀಂದ್ರ ಕರಾಜಾತನಿಗೆ |
ಭಾಸುರ ರಘುವೀರಾರ್ಚಿಪಗೆ|
ಶ್ರೀಶಕೇಶವ ಪಾದಾರಾಧಕಗೆ ಸುರ|
ರೀಶನೆನಿಪ ರಂಗನಾಥನಿಗೆ | ಮಂಗಳಂ ಜಯ ಮಂಗಳಂ||3


No comments:

Post a Comment