Labels

Tuesday, 17 December 2019

ಯಾಕೆ ಕಡೆಗಣ್ಣಿಂದ yaake kadeganninda

ಯಾಕೆ ಕಡೆಗಣ್ಣಿಂದ ನೋಡುವೆ-ಕೃಷ್ಣ
ನೀ ಕರುಣಾಕರನಲ್ಲವೆ? ಪ
ಭಕ್ತವತ್ಸಲ ನೀನಲ್ಲವೆ-ಕೃಷ್ಣ ಚಿತ್ತಸುಖದಾತ ನೀನಲ್ಲವೆ?
ಅತ್ಯಂತ ಅಪರಾಧಿ ನಾನಾದಡೇನಯ್ಯ
ಇತ್ತಿತ್ತ ಬಾ ಎನ್ನಬಾರದೆ ರಂಗ1
ಇಂದಿರೆಯರಸ ನೀನಲ್ಲವೆ ಬಹು ಸೌಂದರ್ಯನಿಧಿ ನೀನಲ್ಲವೆ?
ಮಂದಮತಿ ನಾನಾದಡೇನು ಕೃಪಾ
ಸಿಂಧು ನೀ ರಕ್ಷಿಸಬಾರದೆ ರಂಗ 2
ದೋಷಿಯು ನಾನಾದಡೇನಯ್ಯ-ಸರ್ವ ದೋಷರಹಿತ ನೀನಲ್ಲವೆ?
ಗಾಸಿಯೇತಕೆ ನಿನ್ನ ನಂಬಿದೆ ಸಲಹಯ್ಯ
ಶೇಷಶಾಯಿ ಶ್ರೀ ಪುರಂದರ ವಿಠಲ 3

No comments:

Post a Comment