Labels

Wednesday, 18 December 2019

ಸಂಗಾವೇತಕೆ ಅಲ್ಪರೊಡನೆ sangavetake alparodane

ಸಂಗಾವೇತಕೆ ಅಲ್ಪರೊಡನೆ ಗುಣವಿಲ್ಲ
ಮಂಗ ಮನುಜನ ಕೂಡ ಮಾತಾಡಸಲ್ಲ ಪ.
ಪರರ ಕೆಣಕಿ ತನ್ನ ಹಿರಿಯತನ ಕೆಡಲೇಕೆ ?
ಹರಕೆಯಿಲ್ಲದ ಮೇಲೆ ಹಾದಿಯಿಸಲೇಕೆ ?
ಮುರುಕು ಮನೆಯಲಿ ತಾ ಕಷ್ಟವ ಪಡಲೇಕೆ ?
ಸರಿಬಾರದವರೊಡನೆ ಸರಸ ಮಾತುಗಳೇಕೆ ? 1
ತೊತ್ತಿನ ಕೂಡಾಡಿ ಅತಿದೀಕ್ಷೆ ಕೆಡಲೇಕೆ ?
ಹೊತ್ತಿಗಲ್ಲದವನ ಕೂಡ ಗೆಳೆತನದ ಮಾತೇಕೆ ?
ರತ್ನವನು ನಾಯ ಕೊರಳಿಗೆ ಸುತ್ತಿ ಬಿಡಲೇಕೆ ?
ಕತ್ತೆಯ ಮೇಲೇರಿ ಕೆಡಲೇಕೆ ಮನುಜಾ ? 2
ನೆಲೆ ತಪ್ಪಿದ ಮೇಲೆ ನಂಟ - ಬಂಧುಗಳೇಕೆ?
ಸಲುಗೆಯಿಲ್ಲದ ಮೇಲೆ ಛಲವು ತನಗೇಕೆ ?
ಬುಲುದೈವ ಪುರಂದರವಿಠಲನಿರಲಿಕ್ಕೆ ?
ಹಲವು ದೈವದ ಗೊಡವೆ ನವಗೇಕೆ ಮನುಜಾ ? 3

No comments:

Post a Comment