Labels

Wednesday, 18 December 2019

ಸದರವಿಲ್ಲವೆ ನಿಜಯೋಗ sadaravillave nijayoga

ಸದರವಿಲ್ಲವೆ ನಿಜಯೋಗ | ಸಚ್ಚಿದಾನಂದ |
ಗುರು ದಿನಂಬರನ ಸಂಯೋಗ ಪ.
ಅಡಿಯನಂಬರ ಮಾಡದನಕ | ಅಗ್ನಿ |
ಕಿಡಿಯೆದ್ದು ಮೇಲಣ ಕೊಡನುಕ್ಕದನಕ ||
ಒಡನೆರಡೊಂದಾಗದನಕ | ಅಲ್ಲಿ |
ಒಡಗೂಡಿ ಅಂಗನೆ ನುಡಿ ಕೇಳದನಕ 1
ನಾಡಿ ಹಲವು ಕಟ್ಟದನಕ | ಬ್ರಹ್ಮ |
ನಾಡಿಯೊಳು ಪೊಕ್ಕು ಮುಳುಗಾಡದನಕ
ಕಾಡುವ ಕಪಿ ಸಾಯದನಕ | ಸತ್ತ
ಓಡಿನೊಳಗೆ ರಸ ಕಟ್ಟಿಕ್ಕದನಕ 2
ಅರಿಕುಂಭ ಕಾಣದನಕ | ಅಲ್ಲಿ |
ಸಾಧಿಸಿ ಭೇದಿಸಿ ಸವಿಯುಣ್ಣದನಕ ||
ಭೇದವು ಲಯವಾಗದನಕ | ಬಡ |
ದಾದಿಕೇಶವ ನಿಮ್ಮ ನೆಲೆಗಾಣದನಕ* 3

No comments:

Post a Comment