Labels

Monday, 16 December 2019

ನಾರಸಿಂಹ ನಿನ್ನ ಭಜಿಸುವೆನು naarasimha ninna bhajisuve

ನಾರಸಿಂಹ ನಿನ್ನ ಭಜಿಸುವೆನು ಶ್ರೀ ಮಾರಜನಕನೆ
ಸೂರಿಗಳರಸ ಬಳ್ಳಾರಿಲಿ ಮೆರೆವಂಥ
ನಾರಸಿಂಹ ನಿನ್ನ ಭಜಿಸುವೆ ಪ
ಸುರಪವೈರಿಯ ಸೂರಿಮಾಡಿದ | ಸೂರಿಗಳ ಭಯ ಘೋರಬಿಡಿಸಿದ
ಕ್ರೂರ ದೈತ್ಯನ ಕೊರಳ್ಹಾರ ಹರಿದಶಿರಿ1
ಶ್ರೀಶ ನಿನ್ನಯದಾಸತ್ವಕೆ ಆಶಿಸುವೆ | ಎನ್ನ ಪೋಷಿಸುವುದೊ
ದೋಷದೂರಿನೆ ನರಸಿಂಹ ವಿಠಲ 2
ಎನ್ನ ಬಿನ್ನಪವನ್ನು ಮನ್ನಿಸಿ ಇನ್ನು ಈ ಪುರಕಿನ್ನು ಸಾರಿದೆ
ಘನ್ನ ಮಹಿಮೆ ಶಿರಿ ನರಸಿಂಹ ವಿಠಲನೆ 3

No comments:

Post a Comment