Labels

Friday, 3 January 2020

ಉದಯದಲೆದ್ದು ಸದಾಶಿವ ಎನ್ನಿ udayadalleddu sada shiva enni

 ಉದಯದಲೆದ್ದು ಸದಾಶಿವ ಎನ್ನಿ |ಅದರಿಂದಲಿ ಸದ್ಗತಿಗಿರುವದು ಒಂದೇ ಹಾದಿ |ನಾನಾ ಗ್ರಂಥಗಳ್ಯಾತಕ ಓದೀ |ಓದಿದರೋದಲಿ ಬೇಕಧ್ಯಾತ್ಮಾ ||ಸಾಧಿಸಿ ಬರುವನು ಶಿವ ಸರ್ವೋತ್ತಮಾಸರ್ವೋತ್ತಮ ತಿಳಿದರೆ ಸಾಕು |ಅನೇಕ ಶಾಸ್ತ್ರಗಳೇತಕೆ ಬೇಕು |ಬೇಕೆಂಬೋದೇ ಬಿಡುವದೆ ಪರಮಾರ್ಥಲೋಕದ ಪರಿಯಲ್ಲಿರುವದೆ ಸ್ವಾರ್ಥ |ಸ್ವಾರ್ಥಕೆ ಪರಮಾರ್ಥಕೆ ಬಹು ದೂರಾ |ಎರಡೂ ಸಮನಿಸಿದವನೇ ಧೀರಾ ||ಧೀರ ಉದಾರಗೆ ಆರ ಹಂಗಿಲ್ಲಾ |ಸೂರೆಗೊಂಡನು ಮೂಜಗವೆಲ್ಲಾ |ಎಲ್ಲರಿಗೆ ತಾ ಬಲು ಕಿರಿದಾಗಿ |ಬಲ್ಲತನದ ಬಡಿವಾರವ3ೀಗಿನೀಗಿ ನಿಶ್ಚಿಂತ್ಯಾದರ ತ್ಯಾಗಿ ||ತ್ಯಾಗವು ಬಲಿತರೆ ಅವನೇ ಯೋಗಿಯೋಗಿಗೆ ಮೂಲಾ ಐಕ್ಯದ ಮಾಟಾ |ಬೇಗನೆ ತಿಳಿಯದು ಜೀವ ಶಿವ ಕೂಟಾ |ಕೂಟವ ತಿಳಿಯದೆ ಯಾತರ e್ಞÁನಿ |ಚಾಟಕನಾದರೆ e್ಞÁನಕೆ ಹಾನಿಹಾನಿಗೆ ಹಾನಿ ತಂದವ ಜಾಣಾಸ್ವಾನುಭವದಲಿದ್ದವ ಪ್ರತಿಗಾಣಾ |ಪ್ರತಿಗಾಣನು ಶಿವರತಿಯುಳ್ಳವನು |ಗತಿ ಬಯಸುವನು ಗುರು ಚರಣವನು |ಚರಣಗಳಲ್ಲಿ ವರಗಳು ಉಂಟು |ಗುರುಹಿರಿಯರಿಗೆ ಶರಣು ಹೋಗಿರಿ |ಪರಿಣಾಮದ ಘೋರಿಗೆ ಪರಿಪರಿ ಸ್ತುತಿಗಳು |ಪರಿ ಪರಿಸ್ತುತಿಗೆ ಪರಿಪರಿ ಪೂಜೀ |ಪರಿಪರಿ ಪೂಜಿಗೆ ಪರಿಪರಿ ವಾಜೀ ||ವಾಜಿ ಒಂದಾದರೆ ಸಹಜವೆ ತಾನು |ಮೂಜಗದೊಳಗಿದು ಸೋಜಿಗವೇನು |ಸೋಜಿಗವೆಂಬದು ಶ್ರಮದಲಿ ಮಾಯಾ |ವಾಜಿಗಾರ ಶಿವ ಬಲ್ಲ ಉಪಾಯಾ |ಉಪಾಯ ಹೇಳಲು ಜಡ ಜೀವರಿಗೆ |ಅಪಾಯ ಕಾಣ್ವುದು ಬೇಕಿಲ್ಲದವಗೆ |ಅರಿಗಳ ಮೇಲುವುದು ಜನ್ಮದ ಭಯಕೆ |ಕರೆವುತಲ್ಯಾದೆ ಮುಕ್ತಿ ಭರದಲಿ |ಕೂಗಿರಿ ಕೂಗಿರಿ ಜಾಗರದವರು |ಹೇಗೋ ಎಂತೋ ಸದಾಶಿವನಾಟಾ |ಮಾರ್ಗವ ತಿಳಿದರೆ ಅದು ಬಹು ನೀಟಾ |ನೀಟಿರಲಿಕ್ಕೆ ಡೊಂಕನೆ ಮಾಡಿ |ಅನೇಕ ಜನ್ಮದ ಕಂಟಕ ಕೂಡಿ |ತೋಡಿಗೆ ಓಡಿಗೆ ಯಾತರ ಭಾವ |ಆಡಲಾಗದೂ ಶಿವನೇ ಕಾವಾ |ಕಾವುದು ಕೊಲ್ವುದು ದೇವರ ಕೈಯ್ಯ ಪಾವನ ಮಾಡೊ ಗುರು ನಮ್ಮಯ್ಯ |ನುಡಿದರೆ ಆತನು ನುಡಿಸುವದೆ ಸಾರು |ನೋಡಿದರಾತನ ನೋಟವೆ ಸ್ಪರ್ಶಾ |ಓಡಿದರಾತನು ತಾನೇ ಪುರುಷ |ನೊಂದದೆ ಬೆಂದದೆ ಹೊದಿಸುವನಲ್ಲ |ಬಂದಾನದಕಡೆ ಘೋದಿಸುವನಲ್ಲ |ಕಾಯುವನು ಗುರು ಸಂಸಾರದಿ ನೊಂದಾ |ಸುರರೂ ತೋರದು ಸುಖ ಸಂವಾದಾ |ಭೋರನೆ ಕರೆವುದು ನಾಲ್ಕು ವೇದಾ |ವೇದವಿಕಾರಗೆ ವೇದ ಮೂಲಾ |ಆದರೆ ಅವಗೆ ವೇದವೆ ಶೂಲಾ |ಶೂಲಕೆ ಬಿದ್ದನು ದೇಹಾಭಿಮಾನಿ |ಕಾಲವ ಗೆದ್ದನು ಆತ್ಮe್ಞÁನಿ |e್ಞÁನಿಗೆ ಲಕ್ಷಣ ಹೇಗಿರಬೇಕು |ಏನೇನುಳಿಯದು ಮನಸಿನ ಕಾಕು |ಕಾಕು ಬುದ್ಧಿಗೆ ಶರಣು ಮಾಡಿ |ಲೋಕದೊಳಗೆ ಇರುತಿಹನೆ ಕೂಡಿ |ಕೂಡಿದರಾತನು ನೀರಿಗೆ ನೀರು |ಪುರುಷನೆಂಬುವನು ಪುರದಲಿ ವಾಸಾ |ಇರುತಿಹನು ಹಿಂಡನಗಲಿ ಉದಾಸಾ |ಉದಾಸದ ಸಾಧೈರ್ಯದ ಮೇರು |ಸದಾ ಶರಣನ ಬಯಕೆ ಐನೂರು |ಎಣಿಕೆಯಿಲ್ಲದೆ ಶರಣನು ಮಾಡಿ |ತಿಣಿಕ್ಯಾಡಿ ನೀವ್ ದಣಿಯಲಿ ಬ್ಯಾಡಿ |ಹಣಿ ಮಣ ಕಾಲು ದಡ್ಡಾದದ ನೋಡಿ |ದಶಗ್ರಂಥಗಳು ಪಠಿಸಿ ಮುಖಕಾಗಿ |ಆಗಮ ತಿಳಿಯದೆ ಯಾತಕೆ ಕೂಗಿ |ಕೂಗಿ ಕೂಗಿ ಬಲಿದಾರೇನಾ |ಬಳಿಗೆ ಬಂದಿತೇ ಆತ್ಮe್ಞÁನಾ |ಆತ್ಮe್ಞÁನಕೆ ಅವಘಡವ್ಯಾಕೆ |ತೀರ್ಥಯಾತ್ರೆಗೆ ತಿರುಗಲಿ ಬೇಕೆ |ಹಿರದಿರಲಿಕ್ಕೆ ಕಿರದರ ಸಂಗ |ಕರೆಯದೆ ಬಂತಭಿಮಾನದ ಭಂಗ |ಕಾಮಿಸಿ ಮೋಹಿಸಿ ಪಡೆವನು ಸ್ವರ್ಗ |ನಂಬಿದವರಿಗೆ ಜನ್ಮದಪವರ್ಗ |ದಾನವಕೊಟ್ಟರೆ e್ಞÁನಕೆ ಸರಿಯೆ |ಆನೆ ಕುದುರೆ ಕಟ್ಟಲವ ದೊರೆಯೆ |ರಥದಲಿ ಪರ್ವತ ಶಿಖರವನೇರಿ |ಹತಗೊಂಡಿಹನು ಅವಫಡ ತೋರಿ |ಖಂಡಿಸಿ ದಂಡಿಸಿ ದೇಹವ ಕೂಡಿ |ಮಂಡಿಸಿ ಪ್ರಲಯದಿ ಮುಕ್ತಿಯ ಬೇಡಿ |ಮಸಗುಣ ಅಧ್ಯಾತ್ಮಕೆ ಉಂಟೆ |ಕಾಮಶಾಸ್ತ್ರ ಸನ್ಯಾಸಿಗೆ ಉಂಟೆ |ಅಗಣಿತ ದುರ್ಲಭ ಬ್ರಹ್ಮe್ಞÁನ |ಸಹಜವಾದರೆ ಆತ್ಮನಿದಾನ |ಸ್ನಾನ ಕವಚ ಮಾನಸವೇ ಮೋಕ್ಷ |ಮೀನ ಮಾಡಿತದಕೇನೋ ಅಪೇಕ್ಷಾ |ಗಾಳಿಯ ಭಕ್ಷಿಸಿ ಪಾಲಿಸಿ ಗಾತ್ರಾ |ವ್ಯಾಳ್ಯಕೆ ದೊರಕದು ತಪಸಿನ ಸೂತ್ರಾ |ತರಿದು ತೊಪ್ಪಲವ ಮೆಲವದಕೇನು |ಕುರಿ ತಾ ಮೆಲುವುದು ಅದು ತಪಸೇನು |ಇಲಿ ನೆಲದೊಳು ತಾ ವಾಸ ಮಾಡಿ |ನೆಲೆಗಾಣುವದೇ ಗತಿಗೆ ಕೂಡಿ |ಕತ್ತೆ ಬೂದಿ ಬೂದಿ ಹುಸಿ ಬತ್ತಲೆಯ |ಹೊತ್ತಿತೆ ಹಿರೆತನವಾಯಿತೆ ಯೋಗಿ |ಬಕ ಕುಳಿತಂತೆ ಮಾಡುವ ಧ್ಯಾನ |ಅವರಿಗೆ ದೊರಕದು ಬ್ರಹ್ಮe್ಞÁನ |ಹಟಯೋಗದಿ ವಾಯು ದಣಿಸುವದೇಕೆ |ಷಟ್ ಚಕ್ರಗಳು ಸಾಧಿಸಬೇಕೆ |ಸ್ಫಟಕ ವರ್ಣಕೆ ಪರಬ್ರಹ್ಮನು ಬೇಕೆ |ಸಾಕು ಸಾಕು ನಿಮ್ಮ ಯೋಗಭಿಮಾನ |ಬೇಕಾದರೆ ತಿಳಿ ಆತ್ಮe್ಞÁನ |ಆತ್ಮe್ಞÁನಕೆ ಅವಘಡವ್ಯಾಕೆ |ಪರಮಾನ್ನಕೆ ಶಿವದಾನವು ಬೇಕೆ |ಯಂತ್ರೋದ್ಧಾರವ ಕಲಿತರೇನು |ಮಂತ್ರದ ಜಪ ಬಲಿದರೇನು |ಅಗಣಿತ ದುರ್ಲಭ ಬ್ರಹ್ಮe್ಞÁನ |ಸಿದ್ಧಗುರು ತ್ರಿಪುರಾಂತಕ ಧ್ಯಾನ |ಪ್ರಕಾಶ ಮುಖದಲಿ ಹೇಳಿದ ರಗಳಿ |ಶಿವ ಸಾಯೋಜ್ಯವೆ ಬೈಲನೆ ಹೊಗಳಿ ||


No comments:

Post a Comment