ಮೋಸ ಹೋದೆನಯ್ಯ ಕೃಷ್ಣ ಮೋಸ ಹೋದೆನಯ್ಯಾ ಪ
ಈಸು ಸುಲಭನೆಂದು ಪೇಳಿ ದೂರ ಸರಿವೆಯೇಕಯ್ಯ
ಇಷ್ಟವಿಲ್ಲವೇ ನಾನು ನಿನಗೆ ಬೇಡವಾದೆನೇ ಅ.ಪ
ಉಡಲು ನಿನ್ನವೆಲ್ಲಾವೆಂದು ಸುಳ್ಳು ಹೇಳಿತೇ ವೇದ
ಕಡಲು ದಾಟಲು ಬೇರೆ ದಾರಿಯಿಲ್ಲವಯ್ಯ
ಒಡಲು ನನ್ನದಾಗಿ ನೊಂದ ನನ್ನ ಕೂಡಯ್ಯ
ಒಡೆಯಶೆಲ್ವರಾಯ ಕೂಡಿಕೊಳ್ಳೊ ಅಯ್ಯ1
No comments:
Post a Comment