Labels

Friday, 3 January 2020

ಕಾಡದಿರು ಕಾಡದಿರು ಕಾಂತ ಕೃಷ್ಣಯ್ಯ kaadadiru kaadadiru kaanta


ಕಾಡದಿರು ಕಾಡದಿರು ಕಾಂತ ಕೃಷ್ಣಯ್ಯ
ಬೇಡಿಕೊಂಬೆನು ನಿನ್ನ ಮನಬಿಚ್ಚಿ ತೋರಿಸುವೆ ಪ
ಪಶುವಾದ ಎನ್ನ ಮನಸು ಪಿಸುಮಾತು ಹೇಳುತಿಹುದು
ತುಸುಗುಣವಿಲ್ಲ ನಿನಗಂತೆ ಬಕುತಿಯೇಕಯ್ಯ ನಿನಗೆ ಅ.ಪ
ಬದುಕು ತಪ್ಪಿಸಿ ನಿಲ್ಲು ನೀನಾಗಿ ಎನ್ನುತಿದೆ
ಕದಿಮೋಸ ಮನವನು ನಂಬಿ ಬಾಳುವೆನೆಂತು
ಬುದ್ಧಿ ಕಲಿಸಯ್ಯ ಮನಕೆ ಬೆಳಕು ತೋರಿಸು ನಿನ್ನ
ಬದ್ಧಗೆಳೆಯನಾಗಿಸು ಅದನು ಬದುಕಿ ಬಾಳುವೆನಯ್ಯ 1
ಹಿಡಿಯಾಸೆ ಎನಗುಂಟು ಗಂಟುಕಟ್ಟಿ ನಿನ್ನೊಡನೆ
ನಡೆವೆ ದಿಟ್ಟತನದಲಿ ಕಮಲಾಕ್ಷ ಲಾಲಿಸಯ್ಯ
ಬಿಡಲಾರೆ ನಿನ್ನನೀಗ ಬೆಳಕು ಕಂಡಿತು ಎನಗೆ
ಒಡೆಯ ಶೆಲ್ವರಾಯ ನನಸು ಕನಸಾಗಿ ಮಾಡದಿರು 2


No comments:

Post a Comment