Labels

Wednesday, 1 January 2020

ಜಯ ಜಯವೆಂಬೆ ನಾನು jaya jaya vembe naanu


ಜಯ ಜಯವೆಂಬೆ ನಾನು ಶ್ರೀವರ ನಿನಗೆ ಪ
ಜಯವೆಂಬೆ ಶ್ರೀವರನೆ ಭಯ ದೋಷವರ್ಜಿತನೆ
ಅಯನ ವತ್ಸರಗಳೆಂಬ ನಿಯಮವು ಇಲ್ಲದವನೆ ಅ.ಪ.
ಕಾಲನಾಮಕ ನೀನು ಕಾಲನಾಮಕ ಚಕ್ರ ಸಾಲಾಗಿ
ತಿರುಗಿಣಿ ಪಾಲಿಸುವಿ
ಪಾಲಗಡಲಿನಲ್ಲಿ ಆಲದೆಲೆಯಮೇಲೆ ಕಾಲನು
ನೀಡಿ ನೀ ಮಲಗಿರುವಿ 1

ಸೃಷ್ಟಿಕರ್ತನು ಸೃಷ್ಟಿಪಾಲಕ ನೀನು ಶಿಷ್ಟ ಜನರಭಿಪ್ರದ ನೀನು
ಕಷ್ಟಲೇಶವಿಲ್ಲದೆ ಶಿಷ್ಟ ಜನರುಗಳರಿಷ್ಟವೆಲ್ಲವ ನೀ ಕಟ್ಟಿ ಕೆಡಹುವಿ 2
ಭೂವಲಯದಿ ಭವನಾವಿಕನೆ ಯನ್ನ ನಾನೀಪರಿಯಲಿ ನೀಯೋ
ಶ್ರೀವಾಸುದೇವನೆ ಭಾವಜನಯ್ಯನೆ ಕಾವ ಭಕ್ತರ
ದೇವ ಶ್ರೀವತ್ಸಾಂಕಿತನೆ3


No comments:

Post a Comment