ಗುರು ಸಾಕಿದ ಗೂಳಿ ಭರದಿಂದ ಬರುತಿದೆ | ಸರಿಸಿ ಹೋಗಲಿ ಬೇಡಿ ದುರ್ಜನರೇ || ಸರಿಸಿ ಹೋದರೆ ನಿಮ್ಮ ಬರು ಹೋಗುವ ಹಾದಿ | ತೆರ್ರನೆ ನಿಲ್ಲಿಸುವದು ತಿಳಿದು ನೋಡಿ ಪ
ಆರು ಕೋಣಗಳನ್ನು ಅರಿದು ಮುಂದಡಿ ಮಾಡಿ | ಆರೆರ-ಡಾನೆಯ ಅವಚಿಕೊಂಡು | ಕೋರೆತ್ತಿಕೊಂಡು ತಾ ಕೋಪದಿಬರುವಾಗ | ಮೂರು ಮನಿಯ ದಾಟಿ ಮುಂಡಾಯಿತೊ 1
ಇಬ್ಬರನೊಗೆದು ಒಬ್ಬನ ಕೂಡಾ ಪೋದೀತು | ಅಬ್ಬರಿಸುತಲಾದ ಆನಂದದಿ | ಕಬ್ಬು ಬಿಟ್ಟು ಕಬ್ಬಿಣವ ಮೆದ್ದು ದಿಬ್ಬಿ ಗೂಡದಲಿಂದಲುಬ್ಬುತದೆ 2
ಮೋರೆತ್ತಿಕೊಂಡು ಮುಂದಾಡು ಮುಂದಾಡುವ ಸರ್ಪಗೆ | ಮುದ್ದು ಇಕ್ಕುತ ಬಂದು ನಿಲ್ಲುವದು | ಆರು ನೆಲೆಯೆತ್ತಿ ನೀರು ಕುಡಿದು ಗೊತ್ತು ಸೇರಿತಲ್ಲಿ ಪುರಿವಾಸನಲ್ಲಿ 3
No comments:
Post a Comment