Labels

Saturday, 4 January 2020

ಗುರುವಿನ ಮರೆಯಾದಿರಮ್ಮ

ಗುರುವಿನ ಮರೆಯಾದಿರಮ್ಮ

ಗುರುವಿನ ಮರೆಯಾದಿರಮ್ಮ ಪ

ಅಂಕಿತವನೆ ಇತ್ತಸಿರಿ ಗುರುವಿನ ನೀನು

ಮನದೊಳು ನೆನೆಯಬÉೀಕಮ್ಮ ತಂಗಿ ಅ.ಪ

ಗುರುವಿನ ಮರೆತರೆ ನಿನಗೆ ಥರಥರ ನರಕ

ಥರಥರನರಕವ ಅನುಭವಿಸಬೇಕಮ್ಮ ತಂಗೀ 1

e್ಞÁನಾನಂದಾತ್ಮಕನಾದ ಶ್ರೀಹರಿಯನ್ನು ಗುರು

ವಿನದ್ವಾರಾ ನೀ ತಿಳಿ ಮಂಗಳಾಂಗಿ 2

ಗುರುವೆ ತಂದೆಯು ಬಂಧು ಬಳಗಾವೆಂದು ಅ

ಕ್ಕರೆಯಿಂದ ನೀ ನೆನೆಯಬೇಕಮ್ಮಾ 3

ಗುರುವಿನ ಸೇವೆಯ ಮಾಡುತ್ತ ಗುರುಗಳ

ಕೃಪೆಗೆ ಪಾತ್ರರಾಗಿ ಬಾಳಬೇಕಮ್ಮಾ 4

ಮಂಗಳ ಮಹಿಮ ಶ್ರೀ ತಂದೆಮುದ್ದುಮೋಹನ್ನವಿಠಲ ದಾಸರೆ

ನಿನಗೆ ಸದ್ಗುರು ಎಂದು ತಿಳಿಯಮ್ಮ ತಂಗಿ

ಈ ಮಾತು ಪುಸಿಯಲ್ಲ ಮರೆಯಬೇಡಮ್ಮ ತಂಗೀ 5

No comments:

Post a Comment