ಬಣ್ಣ ಬಣ್ಣದ ಬುಗುರಿಯಾಟವ ಅಡುತಿಯರುವೆಯಾ ರಂಗ
ಗಿಣ್ಣು ಗಿಣ್ಣಲಿ ಕನಿತುನಿಂತಿಹ ಹಣ್ಣನಿದನು ಕಾಣೆಯಾ ಪ
ನೀನು ಬೆಳಿಸಿದ ಹಣ್ಣು ಎನ್ನುವ
ಮಮತೆ ಇಲ್ಲವೆ ಹೇದೇವ
ನನ್ನ ಕೈ ನೀ ಬಿಡುವೆಯಾ ಪುಸಿಯ
ಮಾತಿಗೆ ಮರುಳುಹೋಗಿ ಅ.ಪ
ನಿನ್ನ ಊರಲಿ ನೀನು ಕುಳಿತರೆ ಭಾಗ್ಯವೆನಗದು ಆಯಿತೆ
ನನ್ನ ಇಳಿಯಿಸಿ ಅರಿವು ಕೊಟ್ಟು ನಡೆಯ ಕಲಿಸಿದೆ ಏತಕೆ
ಸನ್ನಡೆಯು ಬಂದಿತು ನುಡಿಯು ಬಂದಿತು
ಇನ್ನು ಬರದೇ ಇರುವೆಯಾ
ನನ್ನಲ್ಲಿ ಸಹನೆ ಇಲ್ಲವೆಂದು ಅರಿಯಲಾರೆಯಾ ದೇವನೇ 1
ಮೋಸ ಹೋಗದೆ ಮಾಸಿಹೋಗದ
ನೆನಪು ಕೊಟ್ಟಿಹೆ ರಂಗ
ಆಸೆ ಮತಿಯು ದಾರಿ ನೋಡಿದೆ ದೂರ ದಡವನು ದಾಟಿಸೈ
ಭಾಷೆ ನಿನ್ನ ಮಾತ ನೀನು ತೆಗೆದುಕೊ
ನಾನು ಅದರೊಳು ನಿಂತಿಹೆ
ಓ ಶೆಲ್ವರಾಯನೆ ಮಾಧವ ಮತ್ತೆಯಾರನು ಕೇಳಲಿ 2
No comments:
Post a Comment