ವರಕವಿಗಳಿದ್ದಲ್ಲಿ ನರಕವಿಗಳ ಕೊಂಡಾಡಬಾರದು - ಇಂಥಾ
ಧರಣಿಯ ಕಲ್ಲಿಗೆ ಸ್ಥೀರವೆಂದು ಪೂಜೆಯಮಾಡಬಾರದು ಪ.
ಆಡಿಗೋದ ಮಡಕಿಗೆ ಜೋಡಿಸಿ ಒಲೆಗುಂಡ ಹೂಡಬಾರದು
ಬಡತನ ಬಂದರೆ ನಂಟರ ಬಾಗಿಲ ಸೇರಬಾರದು 1
ಮಡದಿಯ ನುಡಿ ಕೇಳಿ ಬಡವರ ಜಗಳಕೆ
ಹೋಗಬಾರದು - ಬಹಳ
ಬಡತನ ಬಂದವಳ ಕೈಯಿಂದ ಅಡಿಗೆಯ ಉಣ್ಣಬಾರದು 2
ಪಾಪಿಗಳಿದ್ದಲ್ಲಿ ರೂಪದ ಒಡವೆಯ ತೋರಬಾರದು - ಕಡು
ಕೋಪಿಗಳಿದ್ದಲ್ಲಿ ಅನುಕೂಲ ಗೋಷ್ಠಿ ಮಾಡಬಾರದು 3
ಪರರ ನಿಂದಿಸಿ ಪರಬ್ರಹ್ಮ ರೂಪೇಂದ್ರನ ಜರೆಯಬಾರದು
ವರದ ಶ್ರೀ ಪುರಂದರವಿಠಲನ ಸ್ಮರಣೆಯ ಮರೆಯಬಾರದು 4
No comments:
Post a Comment