Labels

Wednesday, 18 December 2019

ಸತಿಗೆ ಸ್ವಾತಂತ್ರ್ಯವ ಕೊಡದಿರಿ satige swatantra Kodadiri

ಸತಿಗೆ ಸ್ವಾತಂತ್ರ್ಯವ ಕೊಡದಿರಿ - ನೀವು
ಮತಿಗೆಟ್ಟು ಭ್ರಮೆಯ ಬಡದಿರಿ ಪ.
ಪತಿಗೆ ಬಣ್ಣನೆ ಮಾತನಾಡ್ಯಾಳು - ತಾನು
ಮತಿಯಿಲ್ಲದೆ ಮೆಚ್ಚನಾಡಳು
ಅತಿ ಹರುಷದಲಿ ಬಂದು ಕೂಡ್ಯಾಳು ಕೂಡಿ
ಖತಿ ಕರಕರೆಯನು ಮಾಡ್ಯಾಳು 1
ತಂದೆ - ತಾಯ್ಗಳನೆಲ್ಲ ತೋರಿಸ್ಯಾಳು - ನೀ
ಒಂದೆಡೆ ಬಾಯಿಂದು ಬರಿಸ್ಯಾಳು
ನಿಂದಿಸಿ ಬೆಯ್ಯುತ್ತ ಬೆರೆಸ್ಯಾಳು ನಿನ್ನ
ನೊಂದ ಪಡಿ ಭತ್ತಕೆ ಬಾಯ ತೆರೆಸ್ಯಾಳು 2
ತಂದಿದ್ದರೊಳಗರ್ಧ ಕದ್ದಾಳು ಕದ್ದು
ತಂದು ಸುಳ್ಳಹೇಳಿ ಮೆದ್ದಾಳು
ಮುಂದಿದ್ದ ಕೂಸಿನ ಹೊದ್ದಳು - ಹತ್ತು
ಮಂದಿ ಮುಂದೆ ಅಡ್ಡಬಿದ್ದಾಳು 3
ಉಂಡ ಊಟವನೆಲ್ಲ ನೆನೆಸ್ಯಾಳು - ತನ್ನ
ಮಂಡೆ ಕೆದರಿಕೊಂಡು ಸೆಣಿಸ್ಯಾಳು
ಭಾಂಡು ಮಾಡಿ ಬಾಯಿ ತೆರಿಸ್ಯಾಳು - ನಿನ್ನ
ಕೊಂಡ ಕೋತಿಯಂತೆ ಕುಣಿಸ್ಯಾಳು 4
ಕರೆತರೆ ಸಂಸಾರ ಸ್ಥಿರವಲ್ಲ - ಈ
ದುರುಳ ಹೆಣ್ಣಿನ ಸಂಗ ಸುಖವಿಲ್ಲ
ನೆರೆದೊರೆಯವರು ನಗುವರೆಲ್ಲ - ನಮ್ಮ
ಪುರಂದರವಿಠಲನು ತಾ ಬಲ್ಲ 5

No comments:

Post a Comment