ರಂಗ ರಥವನೇರಿದನಕ್ಕ- ಮೋಹ- |
ನಾಂಗ ನಮ್ಮ ಸೇರದೆ ಪೋಗುವನಕ್ಕ ಪ
ಮಾತುಳ ಮಥರೆಯೊಳಿಹನಂತೆ - ಅಲ್ಲಿ |
ಮಾತಾಪಿತರಿಗೆ ಬಂಧನವಂತೆ, ಇವರು |
ನೂತನ ಬಿಲ್ಲಿನ ಅರ್ಥಿಗಳಂತೆ ||
ಪೀತಾಂಬರಧರನ ಪೂಜೆ ನೋಡುವೆನೆಂಬ |
ಆತುರದಿಂದಿರೆ ಅಕ್ರೂರನೊಡನೆ ಈಗ 1
ಬಲರಾಮ ಬಂಧುವಿನೊಡಗೂಡಿ ನಂದ-|
ನಡಿಗೆ ಯಶೋದೆಗೆ ವಂದನೆ ಮಾಡಿ-ತಾವು |
ಬಿಡಲಾರೆವೆಂದು ಭಾಷೆಯ ನೀಡಿ ||
ತಡೆಯೆನೆನುತ ತಾಯಿಗೆ ಭರವಸೆಯಿತ್ತು |
ಕಡಲಶಯನನು ಕಾತರದಿಂದಲಿ ಈಗ 2
ಮಧುರಾ ಪಟ್ಟಣದ ಮಾನಿನಿಯರು ಅತಿ |
ಚದುರೆ ಚೆಂಚಲೆ ಚಾಪಲತೆಯರು-ನಮ್ಮ |
ಮದನನಯ್ಯನ ಮೋಹಿಸುತಿಹರು ||
ಕಧಿಜನಾಭ ನಮ್ಮ ಪುರಂದರವಿಠಲ |
ಪದುಮನಾಭನ ಪಯಣವ ನಿಲ್ಲಿಸಕ್ಕ 3
No comments:
Post a Comment