Labels

Tuesday, 17 December 2019

ರಾಯನ ನೋಡಿರೋ - ಮಧ್ವ raayana nodiro madhwa

ರಾಯನ ನೋಡಿರೋ - ಮಧ್ವ - ರಾಯನ ಪಾಡಿರೊ ಪ
ಅಂಜನೆಯಲಿ ಹುಟ್ಟಿ ಅಂಬರಕಡರಿದ
ಹರಿಯೋ - ಸಿಂಹದ - ಮರಿಯೋ |
ಕಂಜಾಕ್ಷಿಯ ಸುದ್ದಿಗೆ ಶರಧಿಯ ಲಂ
ಘಿಸಿದ- ಪುರ - ಸಂಧಿಸಿದ
ಅಂಜದೆ ವನವನು ಕಿತ್ತಿದ ಪುರವನು
ಸುಟ್ಟ - ತಾ ಬಲು - ದಿಟ್ಟಾ |
ಸಂಜೀವನ ಗಿರಿ ತಂದು ವಾನರರ
ಪೊರೆದಾ - ರಾಮನ - ಬೆರೆದಾ 1
ಕುಂತಿ ಕುಮಾರನು ಶೀಮೆಗೆ ಹರುಷದಿ
ಬೆಳೆದ - ಖಳರನು - ತುಳಿದ |
ಅಂತ ಕೌರವ - ದುಶ್ಯಾಸನರಾ ಶಿರ
ತರೆದಾ - ಚಲವನು - ಮೆರೆದ |
ಸಂತಾಪವ ಪಡಿಸಿದ ಕುಜನಕೆ ಭೀಮ -
ನಾದ - ಸನ್ನುತ - ನಾದ |
ಕಂತುಜನಕ ಶ್ರೀ ಕೃಷ್ಣನ ಪಾದದಿ
ಬಿದ್ದ - ಮದಗಜ - ಗೆದ್ದ 2
ಮುನಿಕುಲದಲಿ ಉದಿಸಿದ ಗುರುಮಧ್ವ ತಾ
ನಾದ - ಧರೆಯಲಿ - ಮೆರೆದ |
ಅನಿಮಿಷರೊಡೆಯ ಶ್ರೀವೇದವ್ಯಾಸರ
ಚರಣ - ಅನುದಿನ - ಸ್ಮರಣ |
ಕನಸೊಳು ಕಾಣದ ಅದ್ವೈತಂಗಳ
ಮುರಿದ - ತತ್ತ್ವ - ತೋರಿದ |
ಘನಮಹಿಮ ಶ್ರೀ ಪುರಂದರ ವಿಠಲನ
ದಾಸ - ಪಡೆದ - ಸನ್ಯಾಸ 3

No comments:

Post a Comment