Labels

Tuesday, 17 December 2019

ಮಧ್ವ ಮತದ ಸಿದ್ಧಾಂತದ ಪದ್ಧತಿ ಬಿಡಬೇಡ madhya matada siddanta

ಮಧ್ವ ಮತದ ಸಿದ್ಧಾಂತದ ಪದ್ಧತಿ ಬಿಡಬೇಡ
ಬಿಡಬೇಡ ಬಿಟ್ಟು ಕೆಡಬೇಡ ಕೆಡಬೇಡ ||ಪ||
ಬಿಟ್ಟರೆ ಯಮ ಬೆನ್ನೆಟ್ಟುವ ಮೂಢ ||ಅ.ಪ||
ಹರಿ ಸರ್ವೋತ್ತಮನಹುದೆಂಬ ಜ್ಞಾನವ-
ನರಿತು ಬಾಳ್ವುದಕೆ ಪರತರವಾದ ಮತ ||1||
ಘೋರ ಯಮನ ಭಯ ದೂರ ಓಡಿಸಿ ಮು-
ರಾರಿಯ ಚರಣವ ಸೇರೋ ಸನ್ಮಾರ್ಗವ ||2||
ಭಾರತೀಶ ಮುಖ್ಯ ಪ್ರಾಣಾಂತರ್ಗತ
ನೀರಜಾಕ್ಷ ಪುರಂದರ ವಿಠಲನ ||3||

No comments:

Post a Comment