Labels

Tuesday, 17 December 2019

ಲೊಳಲೊಟ್ಟೆ - ಬದುಕು lolalotte baduku

ಲೊಳಲೊಟ್ಟೆ - ಬದುಕು - ಲೊಳಲೊಟ್ಟೆ ಪ.
ಆನೆ ಕುದುರೆ ಮಂದಿ ಲೊಳಲೊಟ್ಟೆ - ಬಲು |
ಸೈನ್ಯ ಭಂಡಾರವು ಲೊಳಲೊಟ್ಟೆ ||
ಮಾನನಿಯರ ಸಂಗ ಲೊಳಲೊಟ್ಟೆ - ಮಹಾ |
ಮಾನ್ಯ - ವಿಜಯರೆಲ್ಲ ಲೊಳಲೊಟ್ಟೆ 1
ಮುತ್ತು - ಮಾಣಿಕ - ಚಿನ್ನ ಲೊಳಲೊಟ್ಟೆ - ಬಲು |
ಛತ್ರ - ಚಾಮರಗಳು ಲೊಳಲೊಟ್ಟೆ ||
ಸುತ್ತಗಳು ಕೋಟೆಯು ಲೊಳಲೊಟ್ಟೆ - ಅಲ್ಲಿ |
ಸುತ್ತುವ ಜನವೆಲ್ಲ ಲೊಳಲೊಟ್ಟೆ 2
ನೆಂಟರು - ಇಷ್ಟರು ಲೊಳಲೊಟ್ಟೆ - ದೊಡ್ಡ |
ಕಂಟಕಾನಾಹೊದು ಲೊಳಲೊಟ್ಟೆ ||
ಉಂಟಾದ ಗುಣನಿಧಿ ಪುರಂದರವಿಠಲನ |ಬಂಟನಾಗದವ ಲೊಳಲೊಟ್ಟೆ 3

No comments:

Post a Comment