Labels

Tuesday, 17 December 2019

ಲಟಪಟ ನಾ ಸಟೆಯಾಡುವೆನಲ್ಲ latapata naa sateyaaduvanalla

ಲಟಪಟ ನಾ ಸಟೆಯಾಡುವೆನಲ್ಲ |
ವಿಠಲನ ನಾಮ ಮರೆತು ಪೋದೆನಲ್ಲ ಪ.
ಶೇಷಗಿರಿಯ ಮೇಲೆ ಸವುತೆಯ ಬಿತ್ತಿ |
ದೇವಗಿರಿಯ ಮೇಲೆ ಅವತಾರವಿಕ್ಕಿ ||
ಹಾಳೂರಿಗೊಬ್ಬ ಕುಂಬಾರ ಸತ್ತ |
ಗೋಕರ್ಣದೊಳಗೊಬ್ಬ ಪರದೇಶಿ ಅತ್ತ 1
ನಾ ಸಮಯದಿ ಮೂರು ರಾಯರ ಕಂಡೆ
ಕುಪ್ಪುಸ ತೊಟ್ಟ ಕೋಳಿಯ ಕಂಡೆ ||
ಬೆಳ್ಳಕ್ಕಿ ಬೆರಣಿಯ ಮಾಳ್ಪುದ ಕಂಡೆ |
ನರಸೂಳೆಗೆಯ್ವುದ ಕಣ್ಣಾರೆ ಕಂಡೆ 2
ನುಸಿಯೊಂದು ರೊಟ್ಟಿಯ ಸುಡುವುದ ಕಂಡೆ
ಆಡೊಂದು ಮದ್ದಳೆ ಬಡಿವುದ ಕಂಡೆ ||
ಕಪ್ಪೆ ತತ್ಥೈಯೆಂದು ಕುಣಿವುದ ಕಂಡೆ |
ಪುರಂದರವಿಠಲನ ಕಣ್ಣಾರೆ ಕಂಡೆ * 3

No comments:

Post a Comment