Labels

Wednesday, 11 December 2019

ಗುರುವೇ ನೀ ಕರುಣಿಸದಿರಲು ಉಧ್ಧರಿಸುವ guruve nee karunisadiralu

ಗುರುವೇ ನೀ ಕರುಣಿಸದಿರಲು ಉಧ್ಧರಿಸುವ
ಧೊರೆಗಳು ಧರೆಯೊಳು೦ಟೆ                                 || ಪ ||
ಕರುಣಾಸಾಗರ ಎನ್ನ ಕರೆದು ಕೈಪಿಡಿದು ನೀ
ಕರುಣಿಸು ಸುಧೀ೦ದ್ರಕರಜ ರಾಘವೇ೦ದ್ರ              || ಅ ||
ತರುಣಿ ತರಳರೀಶರೀರಬ೦ಧುಗಳುಪ
ಚರಿಸಲಾದಪರೆಲ್ಲ
ಚರಣವಿಲ್ಲದೆ ಪಕ್ಕ ಮುರಿದು ಬಿದ್ದ ಗುಬ್ಬಿ
ಮರಿಯ೦ತೆ ಬಾಯ್ಬಿಡುತಿರಲು ನೋಳ್ಪರೆ ಆಸ್ಮತ್        || ೧ ||
ಕ್ಷಿತಿಯೊಳು ಭಕ್ತರವಾ೦ಛೆಗಳಿತ್ತು
ಪೊರೆವವಾರುತಿ ಕೇಳಿ
ಪತಿತಪಾವನನೆ೦ದು ನತನಾಗಿ ತುತಿಸಿ ತ್ವ
ರಿತದಿ ಬ೦ದು ಶರಣಾಗತನಾದ ಮೇಲಿನ್ನು            || ೨ ||
ದಿನಕರಕುಲಜಾತನೆನಿಪ ರಾಮರ ಪಾದ
ವನಜಾರಾಧಕರೆನಿಪ
ಮುನಿಕುಲೋತ್ತ೦ಸ ಸಜ್ಜನಶಿಖಾಮಣಿ ಗುಣ
ಗಣ ಅಭಿನವಜನಾರ್ಧನವಿಠ್ಠಲನ ದೂತ                  || ೩ ||

No comments:

Post a Comment