Labels

Tuesday, 10 December 2019

ಈತನೇ ಶ್ರೀ ಪ್ರಲ್ಹಾದನು ಆಹ್ಲಾದಕರನು eetane shree pralhadanu aahlaadakaaranu

ಈತನೇ ಶ್ರೀ ಪ್ರಲ್ಹಾದನು ಆಹ್ಲಾದಕರನು            || ಪ ||
ಈತನೇ ಪ್ರಹ್ಲಾದ ಜಗನ್ಮಾತಾಲಕುಮಿಪತಿಯ ಗುಣವ
ಭೂತಳದಲ್ಲಿ ತೋರಿ ಬಹು ನಿರ್ಭೀತಿಯಿಂದ ಮೆರೆದ ಗುರು    || ಅ ||
ದುಷ್ಟ ಹಿರಣ್ಯಕ ಬಹುವಿಧದಲ್ಲಿ ನಿಷ್ಕರುಣಿಯಾಗೆ
ಕಷ್ಟಬಡಿಸೆ ಸುತಗೆ ಜವದಲಿ
ಸೃಷ್ಟಿಗೊಡೆಯ ಸ್ಥಂಭದಿಂದ ದೃಷ್ಟನಾಗಿ ಅಸುರನಂದನ
ಶ್ರೇಷ್ಠ ನಖದಿಂ ಬಗೆಯೆ ಹರಿಯ ನಿಷ್ಠೆಯಿಂದ ನಮಿಸಿದ ಗುರು         || ೧ ||
ಶೂರ ಬಾಲ್ಹೀಕನೆನಿಸಿದ ಬ್ರಹ್ಮಣ್ಯಮುನಿ ಪಾ
ದಾರವಿಂದ ದಯದಿ ಭಜಿಸಿದ
ಘೋರ ಮಾಯಾವಾದಿಗಳನು ವಿದಾರಣ ಮಾಡಿ ಸುಧಾ
ಸಾರಪಾನ ಮಾಡಿ ವಿಬುಧ ಚಾರುಚಂದ್ರಿಕಾ ರಚಿಸಿದ ಗುರು    || ೨ ||
ಸಿಂಧುಶಯನ ಶ್ರೀರಮಾಪತಿವಿಠ್ಠಲನ ಭಕುತಿ
ಯಿಂದ ಭಜಿಪ ರಾಘವೇಂದ್ರ ಯತಿ
ಎಂದೆನಿಸುತ ಮಂತ್ರನಿಲಯ ಮಂದಿರವನು ಮಾಡಿ ಭಕುತ
ವೃಂದವ ಪುರುಷಾರ್ಥಗಳನು ತಂದು ಕೊಡುವ ಕಲ್ಪದ್ರುಮನು        || ೩ ||

No comments:

Post a Comment