Labels

Tuesday, 10 December 2019

ಬಾರೈ ಬಾರೈ ಗುರು ಸಾರ್ವಭೌಮನೇ barai baarai guru sarvabhomane

ಬಾರೈ ಬಾರೈ ಗುರು ಸಾರ್ವಭೌಮನೇ ಪ.
ಉಟ್ಟವಸನವು ತೊಟ್ಟ ಆವಿಗೆ
ಇಟ್ಟ ದ್ವಾದಶ ಊಧ್ರ್ವ ಪುಂಡ್ರವು
ದಿಟ್ಟತನದಿ ಇಟ್ಟು ಕೊರಳೊಳು
ಕಟ್ಟಿ ತುಳಸೀ ಮಣಿ ಮನೋಭೀಷ್ಠವ ಸಲಿಸುತ 1
ದಂಡಕ ಮಂಡಲ ಕೈಯಲಿ ಪಿಡಿದು
ಕಂಡ ಕಂಡದ ಪೂಜೆಗೊಂಬುವ
ಕೊಂಡ ಜನರ ಪರಿಪಾಲಿಸುತಲಿ
ಕಂಡ ಕಂಡವರ ಕಾಯುವ ಕರುಣೆ2
ಭೂತ ಪ್ರೇತ ಭಯ ನಾಶಗೊಳಿಸಿ
ಭೀತಿಯ ಬಿಡಿಸಿ ಮಂತ್ರಾಲಯದಿ
ಖ್ಯಾತಿವಂತ ರುಕ್ಮಿಣೀಶವಿಠಲನ ಕರುಣದಿ

ಪ್ರೀತಿಪ ಜನರ ಮನೋಭೀಷ್ಠವೊಲಿದ 3

No comments:

Post a Comment