Labels

Tuesday, 10 December 2019

ಬಂದ ದುರಿತಗಳ ಕಳೆಯೊ ತಂದೆ ಗುರುರಾಯ banda duritagala kaleyo gururaaya

ಬಂದ ದುರಿತಗಳ ಕಳೆಯೊ – ತಂದೆ ಗುರುರಾಯ
ಕಂದನ ಭವಣೆಯ ಇಂದು ನೋಡದಿರಯ್ಯ        || ಪ ||
ನಿನ್ನ ಹೃದಯವಾಸಿ ನರಹರಿಯ ನಾಮವನು
ಅನುದಿನವು ಬಿಡದೆ ಭಜಿಸುತಿರಲು
ಇನಕಂಡ ಹಿಮದಂತೆ ತನುಬಾಧೆ ಓಡುವುದು
ಅನುಭವಕೆ ತಂದುಕೊಡುವ ಮುನಿಶಿಖಾಮಣಿಯೆ    || ೧ ||
ನಿನ್ನ ಬಾಧೆಯು ಶ್ರೀ ನರಹರಿಯು ಸಹಿಸದೆಲೆ
ಸನ್ನುತದಿ ಬಂದಂತೆ ಸುಧೀಂದ್ರ ಕರಜ
ಖಿನ್ನನಾಗಿಪ್ಪೆನ್ನ ಚೆನ್ನಾಗಿ ಸಲಹಯ್ಯ
ಅನ್ಯನೆನಿಸದೆಲೆ ಶ್ರೀಮೋದಾರ್ಯಮತಚಂದ್ರ        || ೨ ||
ಪ್ರಲ್ಹಾದನೆಂದೆನಿಸಿ ತಂದೆ ಶಾಪವ ಕಳೆದ
ಒಳ್ಳೆ ಶಾಸ್ತ್ರವ ಪೇಳಿ ಓಡಿಸಿದೆ ಮಾಯಿಗಳ
ಬಲ್ಲಿದ ಮಧ್ವೇಶವಿಠ್ಠಲನ ಕೀರುತಿಯ
ಮೇಲಾಗಿ ಪೊಗಳುವ ಮಂತ್ರಾಲಯವಾಸಿ    || ೩ ||

No comments:

Post a Comment