Labels

Thursday, 12 December 2019

ಅತಿ ಮೀರಿತು ಶ್ರೀಹರಿ ಹರಿ ಅನ್ಯಾಯ ati meeriti anyaya

ಅತಿ ಮೀರಿತು ಶ್ರೀಹರಿ ಹರಿ ಅನ್ಯಾಯ |
ಕಲಿಕಾಲ ದುಷ್ಕಾಲ ಅತಿ ಅತಿ ಮೀರಿತು |
ಅಕರ್ಮ ಕುಕರ್ಮ ಅತಿ ಅತಿ ಮೀರಿತು |
ಪತಿಕರಿಸೆನ್ನ ಪುರಂದರ ವಿಠಲರಾಯ 1
ಮಟ್ಟತಾಳ
ಇನ್ನೆಂತೀ ಕಲಿಕಾಲವ ಕಳೆವೆ |
ಎನ್ನೆಂತೀ ಪರಸುಖ ಗತಿ ಪಡೆವೆ |
ಆನೆಂತು ನಿನ್ನ ಕಾಂಬುವೆ ಪುರಂದರ ವಿಠಲ? 2
ರೂಪಕ ತಾಳ
ಈ ಕಲಿಯುಗದಲಿ ಒಂದಡಕಲಗಡಿಗೆ |
ದೇಹ ಬಂಧನ ಬಿಟ್ಟು ಕಾಯುತಹರೆ |
ತನು-ಪ್ರಾಣಂಗಳ ಬಿಟ್ಟು ಕಾಯುತಹರೆ |
ತನ್ನವರೆಲ್ಲ ಮರೆದು ಕಾಯುತಹರೆ |
ಆನೆಂತು ಜೀವಿಪೆ ಪುರಂದರ ವಿಠಲ | 3
ಆದಿತಾಳ
ಎಂತೀ ಪಾಪವ ಕಳೆವೆ ಆಗಲಿ |
ಎಂತು ಆ ಕರ್ಮವ ಕಳೆವೆ ಆಗಲಿ |
ಎಂತಹ ನಾಯಕ ನರಕವೆ ಆಗಲಿ |
ಎಂತಹನಾಢ್ಯ ಪುರಂದರ ವಿಠಲ? 4
ಏಕತಾಳ
ಶ್ರೀಮನ್ನಾರಾಯಣ ಹರಿಪಾರಾಯಣರು |
ಅಂಜುವರೆ ಭಯಕೆ ಅಂಜುವರೆ ಭಯಕೆ? |
ಪುರಂದರ ವಿಠಲ ಹರಿ ಪಾರಾಯಣರು? | 5
ಜತೆ
ಒಂದೆ ನಾಮವೆ ಸಾಕು ಮುಕುತಿಗೆ |
ಪುರಂದರ ವಿಠಲರಾಯ ಮಿಕ್ಕ ನಾಮಕೆ ಋಣಿ ||

No comments:

Post a Comment