Labels

Saturday, 7 December 2019

ಅಪರಾಧವೆಣಿಸದಲೆ ಕಾಯಬೇಕು aparadhavenisadale Kaayabeko

ಅಪರಾಧವೆಣಿಸದಲೆ ಕಾಯಬೇಕು
ಕೃಪಣವತ್ಸಲನೆ ಶ್ರೀ ಮಧ್ವಮುನಿ ಗುರುರಾಯ ಪ
ನೀ ಮಾಡಿದುಪಕಾರ ನಾ ಮರೆವುದೆಂತೋ ಲ
ಕ್ಷ್ಮೀ ಮನೋಹರನ ನಿಜದಾಸಾಗ್ರಣೀ
ಪಾಮರನ ಲೋಕದೊಳು ಧೀಮಂತನೆನಿಸಿದೆ ಮ
ಹಾಮಹಿಮ ನಿನ್ನ ಕರುಣಾಮೃತದ ಮಳೆಗರೆದೂ 1
ಅವಿವೇಕಿ ನಾನು ನಿನ್ನವನೆಂದು ತಿಳಿದು ಎ
ನ್ನವಗುಣಗಳೆಣಿಸದೆ ನಿತ್ಯದಲ್ಲಿ
ಸುವಿವೇಕಿಯನೆ ಮಾಡು ಕವಿವರ್ಯ ತವ ಮನೋ
ತ್ಸವಕೆ ಎಣೆಗಾಣೆ ನಾನವನಿಯೊಳಗಾವಲ್ಲಿ 2
ಏನರಿಯದ ಮೂಢ ಮಾನವನು ನಾನು ಸು
e್ಞÁನವರ್ಯನು ನೀನೆ ಕಾಯಬೇಕು
ಮಾನುತ ಜಗನ್ನಾಥ ವಿಠಲನ ಪದಯುಗಳ ಸ
ಧ್ಯಾನ ಮಾಡುವ ಧೀರಪ್ರಾಣ ಪಂಚಕರಾಯ 3

No comments:

Post a Comment