Labels

Friday, 6 December 2019

ಆ ಮಹಿಮಗೆ ಮಂಗಳಾರತಿಯ ಎತ್ತಿದರು aa mahimage mangalaratiya ettidaru

ಆ ಮಹಿಮಗೆ ಮಂಗಳಾರತಿಯ ಎತ್ತಿದರು ||
ಮತ್ಸ್ಯಾವತಾರ ಶ್ರೀಹರಿಯ ಅಕ್ಷಗಂಗಳದೊಂದು ಬೆಳಕು
ನಿತ್ಯವೇದವ ತಂದ ಬೆಳಕು ತುಂಬಿತು ದ್ವಾರಾವತಿಗೆ ||
ಕೂರ್ಮಾವತಾರ ಶ್ರೀಹರಿಯ ಹೇಮಗಿರಿಯ ತಂದ ಬೆಳಕು
ಬಲ್ಲಿದ ಕಾಯನ್ನ ಬೆಳಕು ತುಂಬಿತು ದ್ವಾರಾವತಿಗೆ ||
ವರಾಹಾವತಾರ ಶ್ರೀಹರಿಯ ಹೊಳೆದ ಕೋರೆದಾಡೆಯ ಬೆಳಕು
ಧಾರುಣಿಯ ನೆಗವಿದ ಬೆಳಕು ತುಂಬಿತು ದ್ವಾರಾವತಿಗೆ ||
ನರಮೃಗರೂಪ ಶ್ರೀಹರಿಯ ಮೆರೆವೊ ನಖದ ಬೆಳಕು
ಉರಿಗಣ್ಣು ಜ್ವಾಲೆಯ ಬೆಳಕು ತುಂಬಿತು ದ್ವಾರಾವತಿಗೆ ||
ವಾಮನಾವತಾರ ಶ್ರೀಹರಿಯ ಭೂಮಿಯನಳೆದೊಂದು ಬೆಳಕು
ಬಾಲಕ ತನಯನ ಬೆಳಕು ತುಂಬಿತು ದ್ವಾರಾವತಿಗೆ ||
ಭಾರ್ಗವಾವತಾರ ಶ್ರೀಹರಿಯ ಮೆರೆವೊ ಬಲುಭುಜದೊಂದು ಬೆಳಕು
ದುರುಳ ಕ್ಷತ್ರೆರ ಗೆದ್ದ ಬೆಳಕು ತುಂಬಿತು ದ್ವಾರಾವತಿಗೆ ||
ದಶರಥತನಯ ಶ್ರೀಹರಿಯ ಎಸೆವೊ ಬಿಲ್ಲುಬಾಣದ ಬೆಳಕು
ಶಶಿವದನೆಯ ತಂದ ಬೆಳಕು ತುಂಬಿತು ದ್ವಾರಾವತಿಗೆ ||
ಗೋಪಿ ಮುದ್ದಾಡಿದ ಬೆಳಕು
ದೇವಕ್ಕಿತನಯನ ಬೆಳಕು ತುಂಬಿತು ದ್ವಾರಾವತಿಗೆ ||
ಬೌದ್ಧಾವತಾರ ಶ್ರೀಹರಿಯ ಬುದ್ಧಿಪಲ್ಲಟದೊಂದು ಬೆಳಕು
ರುದ್ರನ್ನ ಗೆಲಿದೊಂದು ಬೆಳಕು ತುಂಬಿತು ದ್ವಾರಾವತಿಗೆ ||
ಕಲ್ಕ್ಯವತಾರ ಶ್ರೀಹರಿಯ ಹೊಳೆವಾಖಂಡದೊಂದು ಬೆಳಕು
ಗುರು ಹಯವದನನ್ನ ಬೆಳಕು ತುಂಬಿತು ದ್ವಾರಾವತಿಗೆ ||

No comments:

Post a Comment