Labels

Thursday, 26 March 2020

ಆಜ್ಞೆಯಿಂದಾಳಬೇಕಣ್ಣ ಗಂಡ Aajneyindalabekanna


ಆಜ್ಞೆಯಿಂದಾಳಬೇಕಣ್ಣ  ಗಂಡನಾಜ್ಞೆಯ ಮೀರಿ ನಡೆವ ಲಂಡಹೆಣ್ಣ  \\ಪ. \\
ಅತ್ತೆ  ಮಾವನಿಗಂಜದವಳ ತನ್ನಉತ್ತಮ ಪುರುಷನ ಜರಿದು ಝಂಕಿಪ
ಭೃತ್ಯರ ಕಂಡು ಬಾಧಿಪಳ ನಡು ನೆತ್ತಿಯಿಂದಲೆ ಮೂಗ ಕೆತ್ತಬೇಕವಳ   \\1\\
ಹಟ್ಟಿ ಹಟ್ಟಿ ತಿರುಗುವಳ  ತನ್ನ ಗಟ್ಟಿತನದಿ ಮಾಕು ಮಲುಕು ನುಡಿಯುವಳ
ಬಿಟ್ಟಕುಚವ ತೋರಿಸುವಳ  ಇನ್ನು ಹುಟ್ಟು ಹುಟ್ಟಿಲಿ ಬಾಯಿ ಕುಟ್ಟಬೇಕವಳ  \\ 2\\
ಎಂದೂ ಈ ಪರಿಯಿರುವವಳ ಇನ್ನು ಕೊಂದು ಮಾಡುವುದೇನು ಬಿಡಬೇಕವಳ
ಒಂದಿಷ್ಟು ಗುಣವಿಲ್ಲದವಳಪು ಪುರಂದರವಿಠಲರಾಯನಗಲ್ಲದವಳ \\3\\


No comments:

Post a Comment