Labels

Tuesday, 31 March 2020

ಕೇಳಲೊಲ್ಲನೆ ಎನ್ನ ಮಾತನು-ರಂಗ


ಕೇಳಲೊಲ್ಲನೆ ಎನ್ನ ಮಾತನು-ರಂಗ -|
ಕಾಳಿಮರ್ದನನಿಗೆ ಪೇಳೇ ಗೋಪಮ್ಮ ಬುದ್ಧಿ ಪ
ಬಿಟ್ಟ ಕಂಗಳ ಮುಚ್ಚಲೊಲ್ಲನೆ-ಬೇಗ- |
ಬೆಟ್ಟಕೆ ಬೆನ್ನೊಡ್ಡಿ ನಿಂತನೆ ||
ಸಿಟ್ಟಿಂದೆ ಕೋರೆಯ ತೋರ್ಪನೆ-ಬೇಗ-|
ಗಟ್ಟಿ ಉಕ್ಕಿನ ಕಂಬ ಒಡೆದು ಬಂದನೆ ರಂಗ 1
ಮೂರಡಿ ಭೂಮಿಯ ಬೇಡಿದನೆ-ನೃಪರ-|
ಬೇರ ಕಡಿಯಲು ಕೊಡಲಿ ತಂದನೆ |
ನಾರ ಸೀರೆಯನುಟ್ಟುಕೊಂಡನೆ-ಬೇಗ-|
ಚೋರತನದಿ ಹರವಿ ಹಾಲ ಕುಡಿದನಮ್ಮ 2
ಬತ್ತಲೆ ನಾರಿಯರನಪ್ಪಿದ-ಬೇಗ-|
ಉತ್ತಮ ಅಶ್ವವ ಹತ್ತಿದ ||
ಹತ್ತವತಾರವನೆತ್ತಿದ-ನಮ್ಮ-|
ಸತ್ಯಮೂರುತಿ ಪುರಂದರವಿಠಲರಾಯನು 3


No comments:

Post a Comment