Labels

Sunday 29 March 2020

ಏನು ಬೇಡಲಿ ನಿನ್ನ ಹರಿಯೆ


ಏನು ಬೇಡಲಿ ನಿನ್ನ ಹರಿಯೆ ಪ
ಏನ ಬೇಡಲಿ ನಿನ್ನ ಚಂಚಲ ಕಠಿಣನ |
ಮಾನದಿಂದ ಮೋರೆ ಓರೆಮಾಡುವನ ಅ.ಪ
ಕರುಳಹರಕನ - ಏನ ಬೇಡಲಿ |
ತಿರಿದು ತಿಂಬುವನ ||
ಕೊರಳಗೊಯ್ಕ ಅರಣ್ಯ ತಿರುಗವನ ಮೊ - |
ಸರು ಬೆಣ್ಣೆ ಕದ್ದು ತಿಂಬವನ1
ವಾಸಶೂನ್ಯನ - ಬೇಡಲೇನು ಕತ್ತಿ - |
ಬೀಸಿ ಸವರುವನ ||
ಕಾಸುವೀಸವನೆಲ್ಲ ಮೀಸಲು ಮಾಡಿಟ್ಟು |
ಕೇಸಕ್ಕಿ ಉಂಡುಂಡು ವಾಸಿಸುವನ 2
ಬೇಡಿದರೆ ಕೊಡನ - ಮೋರೆನೋಡಿ |
ಭಿಡೆಯ ಹಿಡಿಯದವನ |
ಬಡವರ ಕರೆತಂದು ಅಡಿಗೆ ಸೇರಿಸಿಕೊಂಡ |
ಒಡೆಯ ಪುರಂದರವಿಠಲದೊರೆಯ 3


No comments:

Post a Comment