Labels

Tuesday, 31 March 2020

ಗಂಡಬಿಟ್ಟ ಗೈಯಾಳಿ ಕಾಣಣ್ಣ -


ಗಂಡಬಿಟ್ಟ ಗೈಯಾಳಿ ಕಾಣಣ್ಣ - ಅವಳ
ಕಂಡರೆ ಕಡೆಗಾಗಿ ದಾರಿ ಪೋಗಣ್ಣ ಪ.
ಊರೊಳಗೆ ತಾನು ಪರದೇಶಿಯೊನ್ನವಳು
ಸಾರುತ ತಿರುಗುವಳು ಮನೆಮನೆಯ
ಕೇರಿ - ಕೇರಿಗುಂಟ ಕಲೆಯತ ತಿರುಗುವಳು
ನಾರಿಯಲ್ಲವೊ ಮುಕ್ಕಾ ಮಾರಿಕಾಣ್ಣ 1
ಅತ್ತೆ ಮಾವನ ಕೂಡ ಅತಿ ಮತ್ಸರವ ಮಾಡಿ
ನೆತ್ತಿಗೆ ಮದ್ದನೆ ಊಡುವಳು
ಸತ್ಯರ ದೇವರ ಸತ್ಯ ನಿಜವಾದರೆ
ಬತ್ತಲೆ ಅಡ್ಡಂಬಲೂಡೇನೆಂಬುವಳು 2
ಹಲವು ಜನರೊಳು ಕಿವಿಮಾತನಾಡವಳು
ಹಲವು ಜನರೊಳು ಕಡಿದಾಡವಳು
ಹಲವು ಜನರೊಳ ಕೂಗಿ ಬೊಬ್ಬೆಯನಿಡುವಳು
ತಳವಾರ ಚಾವಡಿಯಲಿ ಬರಲಿ ಹೆಣ್ಣು 3
ಪರಪುರುಷರ ಕೂಡಿ ಸರಸವಾಡುತ ಹೋಗಿ
ನೆರೆದಿದ್ದ ಸಭೆಯಲಿ ಕರೆಯುವಳು
ಮರೆಸಿ ತನ್ನವಗುಣ ಗಾಡಿಯೆಂದು ಮೆರೆವಳು
ಕರಿರೂಪದವಳ ನೀ ಕೆಣಕದಿರಣ್ಣ 4
ಏಸು ಗೃಹಗಳೆಂದು ಎಣಿಸಿ ನೋಡಿಬಂದು
ಬೇಸರದೆ ಜನಕೆ ಹೇಳುವಳು
ಲೇಸಾಗಿ ಪುರಂದರವಿಠಲನು ಹೇಳಿದ
ಹೇಸಿ ತೊತ್ತನು ನೀನು ಕೆಣಕದಿರಣ್ಣ 5


No comments:

Post a Comment