ಏನಾದರೂ ಒಂದಾಗಲಿ - ನಮ್ಮ -
ಮನೆತುಂಬ ದೇವರು ಮರತುಂಡು ಕಲ್ಲು ಪ
ಅತ್ತೆಯ ಕಣ್ಣೊಂದು ಹರಿಯಲಿ |
ಮತ್ತೆ ಮಾವನ ಕಾಲು ಮುರಿಯಲಿ ||
ಹಿತ್ತಲಗೋಡೆಯು ಬಿರಿಯಲಿ - ಕಾ -
ಳ್ಗತ್ತಲೆಯಾದರೂ ಕವಿಯಲಿ ಹರಿಯೆ 1
ಮನೆಯ ಗಂಡ ಮಾಯವಾಗಲಿ |
ಉಣಬಂದ ಮೈದುನ ಒರಗಲಿ - ಸಿರಿ -
ಮನೆಯು ಹಾಳು ಹಾಳಾಗಲಿ - ನಾ -
ದಿನಿ ಅತ್ತಿಗೆಯರು ಸಾಯಲಿ ಹರಿಯೆ........... 2
ಕಂದನ ಕಣ್ಣೊಂದು ಮುಚ್ಚಲಿ | ಆ
ಚಂದ್ರಂಗೆ ಹಾವು ಕಚ್ಚಲಿ ||
ದ್ವಂದ್ವಾರ್ಥವನು ಬಿಚ್ಚಲಿ ಪು -
ರಂದರವಿಠಲ ಮೆಚ್ಚಲಿ ಹರಿಯೆ............ 3
No comments:
Post a Comment