Labels

Sunday 29 March 2020

ಏನಯ್ಯ ನಿನ್ನ ಸಂಗದ ಪರಿ


ಏನಯ್ಯ ನಿನ್ನ ಸಂಗದ ಪರಿ - |
ಮಾನಿನಿಯ ಮರುಳು ಮಾಡಿ ನೋಡಿದವಗೆ ಪ
ಶಿರವ ತೂಗುವಳು, ಚಿತ್ರದ ಪ್ರತಿಮೆಯಂತಿಹಳು |
ಕರವ ಗಲ್ಲದೊಳಿಟ್ಟು ಕಡುಸುಯ್ವಳು ||
ಇರು ಇರುತಲೊಮ್ಮೊಮ್ಮೆ ಎದುರೆದ್ದು ನೋಡುವಳು |
ಬರವ ಕಾಣದೆ ಕಂದಿ ಕುಂದಿ ಬಡವಾದಳೈ 1
ಕಂಬನಿಯ ತುಂಬುವಳು ಕರೆವಳು ಪೆಸಗೊರ್ಂಡು |
ಹಂಬಲಿಸುವಳು ಕಂಡ ಕಾಂತೆಯರೊಳು ||
ಬೆಂಬಿಡದೆ ಜಡೆ ಮುಡಿಯೆ ತೊಡಿಗೆ ಬೀಸಾಡುವಳು |
ಬಿಂಬವರಿತು ಪೊಗುಳುವಳು ನಿನ್ನ ಗುಣಗಣವ 2
ಇನಿತರೊಳೇನಹುದೊ, ನಿನ್ನ ಮೇಲಣ ಸ್ನೇಹ |
ಘನತಾಪದಿಂದ ಗೋಚರವಾಗಿದೆ ||`
ಅನುತಾಪದಿಂದ ಸಲೆ ಬಳಲಿದ ಮಾನಿನಿಯ |
ವನಜಾಕ್ಷ ಪುರಂದರ ವಿಠಲ ಬಂದು ಸಂತಯಿಸೊ 3


No comments:

Post a Comment