Labels

Monday 30 March 2020

ಕಂಡೆ ಕರುಣನಿಧಿಯ | ಗಂಗೆಯ


ಕಂಡೆ ಕರುಣನಿಧಿಯ | ಗಂಗೆಯ |
ಮಂಡೆಯೊಳಿಟ್ಟ ದೊರೆಯ |
ರುಂಡಮಾಲೆ ಸಿರಿಯ | ನೊಸಲೊಳು |
ಕೆಂಡಗಣ್ಣಿನ ಬಗೆಯ | ಹರನ ಪ
ಗಜಚರ್ಮಾಂಬರನ | ಗೌರೀ | ವರ ಜಗದೀಶ್ವರನ |
ತ್ರಿಜಗನ್ಮೋಹಕನ | ತ್ರಿಲೋಚನ | ಭುಜಗ
ಕುಂಡಲಧರನ | ಹರನ 1
ಭಸಿತ ಭೂಷಿತ ಶಿವನ | ಭಕ್ತರ | ವಶದೊಳಗಿರುತಿಹನ |
ಪಶುಪತಿಯೆನಿಸುವನ | ಧರೆಯೊಳು |
ಶಶಿಶೇಖರ ಶಿವನ | ಹರನ 2
ಕಪ್ಪುಗೊರಳ ಹರನ | ಕಂ | ದರ್ಪಪಿತನ ಸಖನ |
ಮುಪ್ಪುರ ಗೆಲಿದವನ | ಮುನಿನುತ |
ಸರ್ಪಭೂಷಣ ಶಿವನ | ಹರನ 3
ಕಾಮಿತ ಫಲವೀವನ | ಭಕುತರ | ಪ್ರೇಮದಿಂ ಸಲಹುವನ |
ರಾಮನಾಮಸ್ಮರನ ರತಿಪತಿ| ಕಾಮನ ಗೆಲಿದವನ | ಶಿವನ4
ಧರೆಗೆ ದಕ್ಷಿಣ ಕಾಶೀ | ಎಂದೆನಿಸುವ | ವರ ಪಂಪಾವಾಸಿ
ತಾರಕ ಉಪದೇಶಿ | ಪುರಂದರ ವಿಠಲ ಭಕ್ತರ ಪೋಷೀ | ಹರನ 5


No comments:

Post a Comment