Labels

Sunday 29 March 2020

ಏನು ಮೆಚ್ಚಿದೆ ಎಲೆ ಹೆಣ್ಣೆ-ಏನು ಮರುಳಾದೆಯೆ |


ಏನು ಮೆಚ್ಚಿದೆ ಎಲೆ ಹೆಣ್ಣೆ-ಏನು ಮರುಳಾದೆಯೆ |
ಏನು ಮೆಚ್ಚಿದೆಯೆಲೆ ಹೆಣ್ಣೆ ಪ
ನೋಟದಿ ಚೆಲುವನೆಂಬೆನೆ ಚಂಚಲ ರೂಪ |
ಮಾಟದಿ ಚೆಲುವನೆ ಬೆನ್ನಲಿ ಬುಗುಟಿ ||
ಗೂಟದಂತೆ ಹಲ್ಲು ಮೊಳದುದ್ದ ಮೋರೆಯು |
ಬೂಟಕತನದಲ್ಲಿ ಬಾಯ ತೆರೆವನಿಗೆ 1
ಅಣುರೂಪದವನಿವ ನಿಲುವು ಉಳ್ಳವನಲ್ಲ |
ಬನವ ತವರಿವವನಂತೆ ಕೈಯಲಿ ಕೊಡಲಿ ||
ಅನುಜರ ಬಿಟ್ಟು ಕಪಿಗಳ ಕೂಡಿ ಆಡುವ |
ಮನೆಮನೆಗಳ ಪೊಕ್ಕು ಕದ್ದು ತಿಂಬವನಿಗೆ 2
ಗಂಭೀರ ಪುರುಷನೆಂಬೆನೆ ದಿಗಂಬರನಿವ |
ಅಂಬರದಲಿ ಕುದುರೆ ಕುಣಿಸುವನು ||
ಅಂಬುಜಾಕ್ಷ ನಮ್ಮ ಪುರಂದರವಿಠಲಗೆ |
ಸಂಭ್ರಮದಿಂದಲಿ ಮರುಳಾದೆ ಹೆಣ್ಣೆ 3


No comments:

Post a Comment