ಆಡಿದನೋಕುಳಿಯ ನಮ್ಮ ರಂಗ ಆಡಿದನೋಕುಳಿಯ \\ಪ.\\
ಕುಂದದ ಕಸ್ತುರಿಯಅಳಿ ಗಂಧದ ಓಕುಳಿಯ ||
ಬಂದರು ಹೊರಗಿನ ನಾರಿಯರಾಡುತ ಚೆಂದದ ಜೀಕುಳಿಯ \\1\
ಪಟ್ಟಿ ಮಂಚದ ಮೇಲೆನಮ್ಮ ರಂಗ ಇಟ್ಟ ಮುತ್ತಿನ ಹಾರ
ಬಟ್ಟ ಕುಚಕೆ ಕಣ್ಣಿಟ್ಟು ಒಗೆದನು ಕುಟ್ಟಿದನೋಕುಳಿಯ 2
ಆರು ಹತ್ತು ಸಾವಿರಗೋಪ | ನಾರಿಯರನು ಕೂಡಿ ||
ಮಾರನಯ್ಯ ಶ್ರೀಪುರಂದರವಿಠಲ ಹಾರಿಸಿ ಜೀಕುಳಿಯ 3
No comments:
Post a Comment